HomeLatest Newsಅಬ್ಬಬ್ಬಾ ಏನ್ ರೇಟಿಂಗ್ ಗುರೂ; ಹಲವು ತಿಂಗಳುಗಳ ಬಳಿಕ ಸ್ಪಷ್ಟ ಹಿಟ್ ಚಿತ್ರ ಕಂಡ ಕನ್ನಡ...

ಅಬ್ಬಬ್ಬಾ ಏನ್ ರೇಟಿಂಗ್ ಗುರೂ; ಹಲವು ತಿಂಗಳುಗಳ ಬಳಿಕ ಸ್ಪಷ್ಟ ಹಿಟ್ ಚಿತ್ರ ಕಂಡ ಕನ್ನಡ ಚಿತ್ರರಂಗ!

ಕನ್ನಡ ಚಿತ್ರರಂಗ ಕಳೆದ ವರ್ಷ ಹೇಳಿಕೊಳ್ಳುವಂತಹ ಯಶಸ್ಸನ್ನೇನೂ ಸಾಧಿಸಲಿಲ್ಲ. ಹಿಟ್ ಚಿತ್ರಗಳನ್ನು ಎಣಿಸಲು ಶುರು ಮಾಡಿದರೆ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ನೆನಪಿಗೆ ಬರುತ್ತವೆ.

ಸು ಫ್ರಮ್ ಸೋ, ಮಹಾವತಾರ ನರಸಿಂಹ ಹಾಗೂ ಕಾಂತಾರ ಚಾಪ್ಟರ್ 1 ಚಿತ್ರಗಳು ಕೋಟಿ ಕೋಟಿ ಗಳಿಕೆ ಮಾಡಿ ಅಬ್ಬರಿಸಿದ್ದು ಬಿಟ್ಟರೆ ಎಕ್ಕ, ಏಳುಮಲೆ, ಛೂ ಮಂತರ್, ಅಜ್ಞಾತವಾಸಿ ಚಿತ್ರಗಳು ಪ್ರೇಕ್ಷಕರಿಂದ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಂಡವು.

ಇನ್ನು ಕಳೆದ ತಿಂಗಳು ತೆರೆಗೆ ಬಂದ ದಿ ಡೆವಿಲ್, 45 ಹಾಗೂ ಮಾರ್ಕ್ ಚಿತ್ರಗಳು ಚಿತ್ರಮಂದಿರದಲ್ಲಿ ಸದ್ದು ಮಾಡಿದವಾದರೂ ಬುಕ್‌ಮೈಶೋನಲ್ಲಿ ವಿಮರ್ಶೆ ಹಾಗೂ ರೇಟಿಂಗ್ ಮೇಲೆ ನಿರ್ಬಂಧ ಹೇರಿದ್ದ ಕಾರಣ ಜನರಿಗೆ ಚಿತ್ರ ಎಷ್ಟರ ಮಟ್ಟಕ್ಕೆ ಇಷ್ಟವಾಯಿತು ಎಂದು ಹೇಳಲು ಸಾಧ್ಯವಾಗಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಹೊಸ ವರ್ಷಕ್ಕೆ ಕಾಲಿಟ್ಟ ಕನ್ನಡ ಚಿತ್ರರಂಗದಲ್ಲಿ ಮೊದಲ ದಿನವೇ ‘ತೀರ್ಥರೂಪ ತಂದೆಯವರಿಗೆ’ ಎಂಬ ಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ ೨೦೨೩ರಲ್ಲಿ ‘ಹೊಂದಿಸಿ ಬರೆಯಿರಿ’ ಎಂಬ ಚಿತ್ರದ ಮೂಲಕ ಕನ್ನಡ ಸಿನಿ ರಸಿಕರ ಮನಗೆದ್ದಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ನೈಜ ಕನ್ನಡ ಸಿನಿ ರಸಿಕರು ಚಿತ್ರಮಂದಿರಗಳತ್ತ ಹೆಜ್ಜೆ ಹಾಕಿದ್ದಾರೆ.

ಇನ್ನು ಈ ಚಿತ್ರ ಈ ಕಳೆದ ತಿಂಗಳು ಬಿಡುಗಡೆಯಾದ ಕನ್ನಡ ಚಿತ್ರಗಳ ಹಾಗೆ ರೇಟಿಂಗ್‌ ಮೇಲೆ ನಿರ್ಬಂಧ ಹೇರದೇ ಬಿಡುಗಡೆಗೊಂಡಿದ್ದು, ಬುಕ್‌ಮೈಶೋನಲ್ಲಿ ರೇಟಿಂಗ್ ವಿಚಾರವಾಗಿ ಹಲವು ತಿಂಗಳುಗಳ ಬಳಿಕ ಸ್ಪಷ್ಟ ಹಿಟ್ ಫಲಿತಾಂಶ ಕಂಡ ಚಿತ್ರವಾಗಿ ಹೊರಬಂದಿದೆ.

ಇಂದು ( ಡಿಸೆಂಬರ್ 6) ಬುಕ್‌ಮೈಶೋನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರಿಂದ ರೇಟಿಂಗ್ ಪಡೆದುಕೊಂಡಿರುವ ಚಿತ್ರ 10ಕ್ಕೆ ಬರೋಬ್ಬರಿ 9.9 ರೇಟಿಂಗ್ ಗಿಟ್ಟಿಸಿಕೊಂಡಿದೆ. ಇಷ್ಟು ಮಂದಿ ರೇಟ್ ಮಾಡಿದರೂ 9.9 ರೇಟಿಂಗ್ ಪಡೆದುಕೊಂಡಿರುವುದು ಪ್ರೇಕ್ಷಕರು ಚಿತ್ರಕ್ಕೆ ಕೊಟ್ಟ ಹಿಟ್ ಸರ್ಟಿಫೀಕೇಟ್ ಆಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular