HomeLatest Newsಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಾಯ್ಬಿಟ್ಟ ಆರೋಪಿ

ಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಾಯ್ಬಿಟ್ಟ ಆರೋಪಿ

ಬೆಂಗಳೂರು: ಬೆಂಗಳೂರಿನಲ್ಲಿ ಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪೊಲೀಸ್ ತನಿಖೆ ವೇಳೆ ಬಂಧಿತ ಆರೋಪಿ ಆಘಾತಕಾರಿ ಮಾಹಿತಿ ಬಾಯ್ಬಿಟ್ಟಿದ್ದು, ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಟೆಕಿ ಶರ್ಮಿಳಾ (34) ಕೊಲೆಯಾಗಿತ್ತು. ಟೆಕ್ಕಿ ಶರ್ಮಿಳಾ ವಾಸವಿದ್ದ ಮನೆಯ ಪಕ್ಕದ ಮನೆಯವನೇ ಆದ ಆರೋಪಿ ಕರ್ನಲ್ (18) ಶರ್ಮಿಳಾ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಆರೋಪಿ ಕರ್ನಲ್ ಈ ಹಿಂದೆ ತನಿಖೆ ವೇಳೆ ಶರ್ಮಿಳಾ ಮೇಲೆ ದೌರ್ಜನ್ಯವೆಸಗಿಲ್ಲ ಎಂದು ಹೇಳಿದ್ದ. ಈಗ ತಾನು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಶರ್ಮಿಳಾಳನ್ನು ಆರೋಪಿ ಕರ್ನಲ್ ಪ್ರೀತಿಸುತ್ತಿದ್ದನಂತೆ. ಆದರೆ ಆಕೆ ನಿರಾಕರಿಸಿದ್ದಳು. ಶರ್ಮಿಳಾಳನ್ನು ಕೊಲೆಗೈಯ್ಯಬೇಕೆಂದು ಒಂದುವರೆ ತಿಂಗಳಿಂದ ಹೊಂಚು ಹಾಕಿದ್ದನಂತೆ. ಪ್ರತಿದಿನ ಟೆರೆಸ್ ಮೇಲೆ ಯುವತಿಯ ಚಲನವಲನಗಳನ್ನು ಗಮನಿಸುತ್ತಿದ್ದ. ಶರ್ಮಿಳಾ ಕೆಲಸಕ್ಕೆ ಹೋಗುವಾಗಲು ಆಕೆಯನ್ನು ಹಿಂಬಾಲಿಸಿ ಹೋಗುತ್ತಿದ್ದ. ಕೆಲಸ ಮುಗಿಸಿ ಮನೆಗೆ ಬರುವಾಗ ಕಾದು ಕುಳಿತಿರುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಲವು ದಿನಗಳಿಂದ ಶರ್ಮಿಳಾ ಮೇಲೆ ಕಣ್ಣಿಟ್ಟಿದ್ದ ಆರೋಪಿ ಕರ್ನಲ್, ಜನವರಿ 3ರಂದು ರಾತ್ರಿ ಶರ್ಮಿಳಾ ವಾಸವಿದ್ದ ಮನೆಗೆ ನುಗ್ಗಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಶರ್ಮಿಳಾ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಆಕೆಯ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದ್ದ. ಶರ್ಮಿಳಾ ಬಿಟ್ಟುಬಿಡುವಂತೆ ಗೋಗರೆದರೂ ಬಿಟ್ಟಿಲ್ಲ. ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಟಿಶ್ಯೂಪೇಪರ್ ಹಾಸಿಗೆ ಮೇಲೆ ಇಟ್ಟು ಬೆಂಕಿ ಹಚ್ಚಿದ್ದಾನೆ.

ಬೆಡ್ ಹಾಗೂ ಮನೆಗೆ ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ಬಾಲ್ಕನಿ ಡೋರ್ ತೆಗೆದು ಅಲ್ಲಿಂದ ಕೆಳಗೆ ಹಾರಿ ಪರಾರಿಯಾಗಿದ್ದಾನೆ. ಬೆಂಕಿ ಅವಘಡದಲ್ಲಿ ಟೆಕ್ಕಿ ಮಹಿಳೆ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾನೆ. ಶರ್ಮಿಳಾಳನ್ನು ತಾನೇ ಅತ್ಯಾಚಾರವೆಸಗಲು ಯತ್ನಿಸಿ ಕೊಂದಿದ್ದು, ಬಳಿಕ ಬೆಂಕಿ ಹಚ್ಚಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular