ಬೆಂಗಳೂರು : ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರ ನಿಶ್ಚಿತಾರ್ಥ ಇತ್ತೀಚೆಗಷ್ಟೇ ನೆರವೇರಿದೆ.ನಮ್ಮ ಜೀವನದ ಈ ಹೊಸ ಹೆಜ್ಜೆಗೆ ನನ್ನ ಎಲ್ಲಾ ಅಭಿಮಾನಿಗಳು ಮತ್ತು followers ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರುತ್ತಿದ್ದೇನೆ ಎಂದು ನಟಿ ಸಂಜನಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಹೌದು. ಸಂಜನಾ ಅವರು ಸಿದ್ದಾರ್ಥ್ ಎಂಬುವವರ ಜೊತೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ಸಿದ್ದಾರ್ಥ್ ಅವರು ವೃತ್ತಿಯಲ್ಲಿ ವೈದ್ಯರು ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ನಡೆದ ಈ ನಿಶ್ಚಿತಾರ್ಥ ಸಮಾರಂಭವು ಕೇವಲ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಬಹಳ ಸರಳವಾಗಿ ನಡೆದಿದೆ.ಸಂಜನಾ ಅವರು ತಮ್ಮ ನಿಶ್ಚಿತಾರ್ಥದ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮತ್ತು ಚಿತ್ರರಂಗದ ಸ್ನೇಹಿತರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಸಂಜನಾ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೂಲಕ ಜನಪ್ರಿಯರಾಗಿದ್ದರು. ನಂತರ ಏಕಾಏಕಿ ಈ ಧಾರಾವಾಹಿಯಿಂದ ಹೊರ ನಡೆದಿದ್ದರು. ಸದ್ಯ ಅವರು ಶ್ರೀಗಂಧದ ಗುಡಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.

