HomeEntertainment'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ಟೀಸರ್ ರಿಲೀಸ್

‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಟೀಸರ್ ರಿಲೀಸ್

ಕಿರಣ್ ಎಸ್ ಸೂರ್ಯ ನಿರ್ದೇಶನದ ಅಭಿಮನ್ಯು ಕಾಶಿನಾಥ್ ಅಭಿನಯದ ಬಹು ನಿರೀಕ್ಷಿತ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಟೀಸರ್ ನಿನ್ನೆಯಷ್ಟೇ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ಚಿತ್ರದಲ್ಲಿ ಅಭಿಮನ್ಯು ಕಾಶಿನಾಥ್ ಸ್ಪೂರ್ತಿ ಉಡಿಮನೆ, ಹಾಗೂ ವಿಜಯಶ್ರೀ ಕಲಬುರ್ಗಿ ಪ್ರಮುಖ ಪಾತ್ರದಲ್ಲಿದ್ದು, ರಾಜಾ ಬಲವಾಡಿ, ಶೋಭನ್, ಪ್ರದೀಪ್, ರಮೇಶ್ ನಾಯಕ್, ರಿಣಿ, ಉಳಿದ ತಾರಾಂಗಣದಲ್ಲಿದ್ದಾರೆ. ಜತಿನ್ ಪಾಟೀಲ್ ಹಾಗೂ III ವೆಂಚರ್ಸ್ ಫಿಲ್ಮ್ಸ್  ಸಂಸ್ಥೆ ನಿರ್ಮಾಣ ಮಾಡಿದ್ದು, ಪ್ರಣವ್ ರಾವ್ ಸಂಗೀತ ಸಂಯೋಜನೆ ನೀಡಿದ್ದಾರೆ. ಗಣೇಶ್ ನೀರ್ಚಾಲ್ ಸಂಕಲನ,  ಸತ್ಯ ರಾಮ್ ಛಾಯಾಗ್ರಹಣ, ಚಂದ್ರು ಅವರ ಸಾಹಸ ನಿರ್ದೇಶನ, ಹಾಗೂ ಜೀವನ್ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular