HomeEntertainment'ಮೈಸಾ' ಚಿತ್ರದ 'ಓ ಮೈಸಾ ರೇ' ಸಾಂಗ್ ರಿಲೀಸ್: ರಶ್ಮಿಕಾ ಮಂದಣ್ಣ ರೌದ್ರಾವತಾರಕ್ಕೆ ಫ್ಯಾನ್ಸ್ ಫಿದಾ!

‘ಮೈಸಾ’ ಚಿತ್ರದ ‘ಓ ಮೈಸಾ ರೇ’ ಸಾಂಗ್ ರಿಲೀಸ್: ರಶ್ಮಿಕಾ ಮಂದಣ್ಣ ರೌದ್ರಾವತಾರಕ್ಕೆ ಫ್ಯಾನ್ಸ್ ಫಿದಾ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಮೈಸಾ’ ಚಿತ್ರದ ಮೊದಲ ಹಾಡು ‘ಓ ಮೈಸಾ ರೇ’ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದೆ. ಟೀಸರ್ ಮೂಲಕ ಕುತೂಹಲ ಮೂಡಿಸಿದ್ದ ಈ ಚಿತ್ರದ ಹೊಸ ಹಾಡಿನಲ್ಲಿ ರಶ್ಮಿಕಾ ಅವರ ತೀವ್ರ ಸ್ವರೂಪದ ರುದ್ರಾವತಾರ ಮತ್ತು ಮಾಸ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಶಕ್ತಿಶಾಲಿ ಕಾಡಿನ ಹಿನ್ನೆಲೆಯಲ್ಲಿ ನೃತ್ಯಜೆಕ್ಸ್ ಬಿಜೋಯ್ ಸಂಗೀತ ಸಂಯೋಜಿಸಿರುವ ಈ ಹಾಡಿನಲ್ಲಿ ಗಿರಿಜನ ಸಂಸ್ಕೃತಿಯ ತಾಂಡವ್ ಶೈಲಿಯ ನೃತ್ಯ ಮತ್ತು ಶಕ್ತಿಶಾಲಿ ಬಿಟ್‌ಗಳಿವೆ. ಬೃಂದಾ ಮಾಸ್ಟರ್‌ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಅತ್ಯಂತ ಆಕ್ರಮಣಕಾರಿ ಹಾಗೂ ಭಾವನಾತ್ಮಕ ಅಭಿನಯ ನೀಡಿದ್ದಾರೆ. ತಮ್ಮ ಪಾತ್ರದ ಕುರಿತು ಬರೆದುಕೊಂಡಿರುವ ರಶ್ಮಿಕಾ, ಈ ಹಾಡನ್ನು “ನೋವು, ಕೋಪ ಮತ್ತು ಜಾಗೃತಿಯ ಯುದ್ಧ ಕಹಳೆ” ಎಂದು ಬಣ್ಣಿಸಿದ್ದಾರೆ.

ತಂದೆ-ಮಗಳ ಅಳಿಸಲಾಗದ ಅನುಬಂಧ ರವೀಂದ್ರ ಪುಲ್ಲೆ ನಿರ್ದೇಶನದ ಈ ಚಿತ್ರವು ಗಿರಿಜನ ಪ್ರದೇಶದ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನೊಳಗೊಂಡಿದೆ. ಆಕ್ಷನ್ ಸನ್ನಿವೇಶಗಳ ಜೊತೆಗೆ ತಂದೆ ಮತ್ತು ಮಗಳ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಮುಖ್ಯವಾಗಿಟ್ಟುಕೊಂಡು ಈ ಸಿನಿಮಾ ರೂಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಡುಗಡೆ ದಿನಾಂಕ ನಿಗದಿ ಅನ್‌ಫಾರ್ಮುಲಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಈಶ್ವರಿ ರಾವ್, ಗುರು ಸೋಮಸುಂದರಂ ಮತ್ತು ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಮೈಸಾ’ ಸಿನಿಮಾ ಮುಂಬರುವ ನವೆಂಬರ್ 27, 2026 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular