ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿಯ ವಿವಾಹ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ಜರುಗಿತು. ಈ ವಿವಾಹ ಕಾರ್ಯಕ್ರಮಕ್ಕೆ ನಟಿ ಮೇಘನಾ ರಾಜ್ ಗೈರಾಗಿದ್ದು ಚರ್ಚೆಗೆ ಕಾರಣವಾಗಿತ್ತು. ಸಂಬಂಧಿಯಾಗಿದ್ದರೂ ಅರ್ಜುನ್ ಸರ್ಜಾ ಅವರ ಮಗಳ ಮದುವೆಗೆ ಯಾಕೆ ಹೋಗಿಲ್ಲ ಎಂಬ ಪ್ರಶ್ನೆ ಮೂಡಿತ್ತು. ಇದರ ಬೆನ್ನಲ್ಲೇ ಇದೀಗ ಸ್ಬತಃ ಮೇಘನಾ ರಾಜ್ ಸ್ಪಷ್ಟನೆ ನೀಡಿದ್ದಾರೆ.
ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅವರು ವಿದೇಶಿ ಉದ್ಯಮಿ ಇಸಾಯ್ ಅವರೊಂದಿಗೆ ವಿದೇಶದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತೀರ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಈ ಅದ್ದೂರಿ ಮದುವೆ ನೆರವೇರಿತ್ತು.
ಈ ಅಪರೂಪದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಧರ್ಮಪತ್ನಿ ಪ್ರೇರಣಾ ವಿದೇಶಕ್ಕೆ ತೆರಳಿದ್ದರು. ಮದುವೆಯ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಆದರೆ, ಈ ಶುಭ ಕಾರ್ಯಕ್ರಮದಲ್ಲಿ ನಟಿ ಮೇಘನಾ ರಾಜ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದು ಸರ್ಜಾ ಕುಟುಂಬ ಹಾಗೂ ಅಭಿಮಾನಿ ವಲಯದಲ್ಲಿ ಹಲವು ಅನುಮಾನ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಇದೀಗ ಈ ಬಗ್ಗೆ ಮೇಘನಾ ರಾಜ್ ಮಾತನಾಡಿದ್ದಾರೆ. ‘ನನ್ನನ್ನು ಆ ಮದುವೆಗೆ ಆಹ್ವಾನಿಸಲೇ ಇರಲಿಲ್ಲ. ಧ್ರುವ ಹಾಗೂ ಪ್ರೇರಣಾ ಅವರಿಗೆ ಆಹ್ವಾನವಿತ್ತು, ಹೀಗಾಗಿ ಅವರು ಹೋಗಿದ್ದರು’ ಎಂದು ಹೇಳಿದ್ದಾರೆ.
ಅರ್ಜುನ್ ಸರ್ಜಾ ಕುಟುಂಬದಿಂದ ನಿಮಗೆ ಮದುವೆಯ ಆಹ್ವಾನ ಏತಕ್ಕಾಗಿ ಬರಲಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೂ ಮೇಘನಾ ರಾಜ್ ಉತ್ತರಿಸಿದ್ದಾರೆ. ‘ನನಗೆ ಏಕೆ ಆಹ್ವಾನ ನೀಡಲಿಲ್ಲ ಎಂಬ ಈ ಪ್ರಶ್ನೆಯನ್ನು ನೀವು ಅವರಿಗೆ ಕೇಳಬೇಕು, ನನಗೆ ಕೇಳಬಾರದು’ ಎಂದು ಖಡಕ್ ಆಗಿ ಹೇಳಿದ್ದಾರೆ.
ಇನ್ನು ನಟಿ ಮೇಘನಾ ರಾಜ್ ಚಿತ್ರರಂಗಕ್ಕೆ ಕಬ್ ಬ್ಯಾಕ್ ಆಗಿದ್ದಾರೆ. ಇತ್ತೀಚೆಗೆ ‘ಜೈಲರ್ 2’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದ ಮೇಲೆ ಅವರ ಅಭಿಮಾನಿಗಳಿಗೆ ಭಾರಿ ನಿರೀಕ್ಷೆಗಳಿವೆ. ಸಾಲು ಸಾಲು ಸಿನಿಮಾಗಳಲ್ಲಿ ಮೇಘನಾ ರಾಜ್ ಬ್ಯುಸಿಯಾಗಿದ್ದಾರೆ.
Disclaimer: ಈ ಸುದ್ದಿಯಲ್ಲಿರುವ ಮಾಹಿತಿಯು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಹಾಗೂ ನಟಿ ಮೇಘನಾ ರಾಜ್ ಅವರು ನೀಡಿರುವ ಹೇಳಿಕೆಯನ್ನು ಆಧರಿಸಿದೆ. ಮದುವೆಗೆ ಆಹ್ವಾನ ನೀಡದಿರುವುದಕ್ಕೆ ಸಂಬಂಧಿಸಿದಂತೆ ಅವರು ಸ್ಪಷ್ಟನೆ ನೀಡಿದ್ದು, ಈ ವಿಚಾರದಲ್ಲಿ ಯಾವುದೇ ಊಹಾಪೋಹಗಳಿಗೆ ನಾವು ಜವಾಬ್ದಾರರಲ್ಲ. ಸುದ್ದಿಯಲ್ಲಿನ ಮಾಹಿತಿಯ ಸತ್ಯಾಸತ್ಯತೆ ಮತ್ತು ಹೆಚ್ಚಿನ ಸ್ಪಷ್ಟನೆಗಾಗಿ ಸಂಬಂಧಪಟ್ಟವರ ಅಧಿಕೃತ ಹೇಳಿಕೆಗಳನ್ನು ಪರಿಗಣಿಸುವಂತೆ ಓದುಗರಲ್ಲಿ ವಿನಂತಿ.

