HomeEntertainment84ರ ಹರೆಯದಲ್ಲೂ ಫಿಟ್‌ನೆಸ್ ಸಾಧನೆ: ನಿದ್ರಾಹೀನತೆ ಮತ್ತು ಜಿಮ್ ಕಸರತ್ತಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಬಿಗ್...

84ರ ಹರೆಯದಲ್ಲೂ ಫಿಟ್‌ನೆಸ್ ಸಾಧನೆ: ನಿದ್ರಾಹೀನತೆ ಮತ್ತು ಜಿಮ್ ಕಸರತ್ತಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಬಿಗ್ ಬಿ!

ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ತಮ್ಮ 84ನೇ ವಯಸ್ಸಿನಲ್ಲೂ ಸತತ ಕೆಲಸ ಮತ್ತು ಶಿಸ್ತಿನ ದಿನಚರಿಯಿಂದ ಕೋಟ್ಯಂತರ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಈ ವಯಸ್ಸಿನಲ್ಲೂ ಸಾಲು ಸಾಲು ಸಿನಿಮಾಗಳು ಹಾಗೂ ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿರುವ ಅವರು, ತಮ್ಮ ವೈಯಕ್ತಿಕ ಬ್ಲಾಗ್‌ನಲ್ಲಿ ಇತ್ತೀಚಿನ ಆರೋಗ್ಯ ಸ್ಥಿತಿ, ಎದುರಿಸುತ್ತಿರುವ ನಿದ್ರಾಹೀನತೆಯ ಸಮಸ್ಯೆ ಮತ್ತು ಜಿಮ್ ಕಸರತ್ತಿನ ಕುರಿತು ವಿವರವಾಗಿ ಬರೆದುಕೊಂಡಿದ್ದಾರೆ.

ಬ್ಲಾಗ್ ಫಾಂಟ್ ಸೈಜ್ ಗೊಂದಲ ಮತ್ತು ನಿದ್ರಾಹೀನತೆ ತಮ್ಮ ಬ್ಲಾಗ್‌ನಲ್ಲಿ ಇತ್ತೀಚಿನ ವಿಚಾರಗಳನ್ನು ಹಂಚಿಕೊಂಡ ಬಿಗ್ ಬಿ, ಬ್ಲಾಗ್ ಬರೆಯುವಾಗ ಅಕ್ಷರಗಳ ಗಾತ್ರವನ್ನು (Font Size) ಬದಲಾಯಿಸಲು ಗೂಗಲ್‌ನಲ್ಲಿ ಹುಡುಕಿದರೂ ತಮಗೆ ಸರಿಯಾಗಿ ಅರ್ಥವಾಗಲಿಲ್ಲ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ನಿಗದಿತ ಸಮಯಕ್ಕೆ ಬ್ಲಾಗ್ ಬರೆಯಲು ಸಾಧ್ಯವಾಗದಿದ್ದಾಗ ಮನಸ್ಸಿನಲ್ಲಿ ಕಳವಳ ಉಂಟಾಗಿ ಬೆಳಗಿನ ಜಾವವೇ ಎಚ್ಚರವಾಗುತ್ತಿದೆ ಎಂದು ತಿಳಿಸಿದ್ದಾರೆ. ಸರಿಯಾಗಿ ನಿದ್ರೆ ಬಾರದೆ ಇದ್ದಾಗ ನಾನಾ ರೀತಿಯ ತಂತ್ರಗಳನ್ನು ಬಳಸಿ ಸೋತ ಮೇಲೆ, ನೈಸರ್ಗಿಕವಾಗಿ ಹೊದಿಕೆ ಹೊದ್ದು ಮಗುವಿನಂತೆ ಮುದುರಿಕೊಂಡು ಮಲಗುವ ಮೂಲಕ ನಿದ್ರೆಗೆ ಜಾರಲು ಪ್ರಯತ್ನಿಸುತ್ತಿರುವುದಾಗಿ ಬರೆದಿದ್ದಾರೆ.

ದೇಹ ಮತ್ತು ಮನಸ್ಸಿನ ನಡುವಿನ ಹೋರಾಟ ಇತ್ತೀಚಿನ ದಿನಗಳಲ್ಲಿ ಸತತ ಕೆಲಸದ ಒತ್ತಡದಿಂದಾಗಿ ಜಿಮ್ ಕಸರತ್ತು ಮತ್ತು ವ್ಯಾಯಾಮದ ದಿನಚರಿಯಲ್ಲಿ ಏರುಪೇರಾಗಿದೆ ಎಂದು ಅಮಿತಾಭ್ ಒಪ್ಪಿಕೊಂಡಿದ್ದಾರೆ. “ಬಿಡುವಿಲ್ಲದ ಕೆಲಸದ ವೇಳಾಪಟ್ಟಿ ಮನಸ್ಸು ಮತ್ತು ದೇಹ ಎರಡರ ಮೇಲೆಯೂ ಪರಿಣಾಮ ಬೀರುತ್ತದೆ. ಹೀಗಾಗಿ ಮತ್ತೆ ಮೊದಲಿನಂತೆ ಫಿಟ್ನೆಸ್ ಕಡೆಗೆ ಗಮನ ಹರಿಸಲು ನಿರ್ಧರಿಸಿದ್ದೇನೆ. ಇಂತಹ ಸಮಯದಲ್ಲಿ ಮನಸ್ಸು ‘ಮುನ್ನುಗ್ಗು’ ಎಂದು ಧೈರ್ಯ ಹೇಳುತ್ತದೆ, ಆದರೆ ದೇಹ ‘ಸ್ವಲ್ಪ ತಡೆ’ ಎಂದು ಎಚ್ಚರಿಸುತ್ತದೆ. ಆದರೂ ವೃದ್ಧಾಪ್ಯದ ಭಾವನೆ ನಮ್ಮನ್ನು ಆವರಿಸಲು ಬಿಡಬಾರದು, ಸದಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು” ಎಂದು ತಮ್ಮ ಬ್ಲಾಗ್‌ನಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular