HomeEntertainment'ಶಿವನಪಾದ' ಚಿತ್ರದ ಟೀಸರ್ ರಿಲೀಸ್

‘ಶಿವನಪಾದ’ ಚಿತ್ರದ ಟೀಸರ್ ರಿಲೀಸ್

ಈಗಾಗಲೇ ತನ್ನ ಟೈಟಲ್ ನಿಂದಲೇ ಸಾಕಷ್ಟು ಸದ್ದು ಮಾಡಿರುವ ಮಾಚಂದ್ರು ನಿರ್ದೇಶನದ ‘ಶಿವನಪಾದ’ ಚಿತ್ರದ ಟೀಸರ್ ಯು ಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು ಈ ಟೀಸರ್ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ನೋಡುಗರಲ್ಲಿ ಕುತೂಹಲ ಕೆರಳಿಸಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಆನಂದ್, ನಾಗೇಶ್, ಮೇಘನಾ, ಸಾಕ್ಷಿ ವರ್ಷಿತ, ಸಾಂಗ್ಲಿಯಾನ, ಶೇಷಗಿರಿ, ನವೀನ್ ಡಿ ಪಡಿಲ್, ಹರಿಹರನ್ ಆಟೋ ನಾಗರಾಜ್, ಅಂಜಲಿ ಗಿರೀಶ್ ತೆರೆ ಹಂಚಿಕೊಂಡಿದ್ದಾರೆ.

ವೀರ ಸಮರ್ಥ್ ಸಂಗೀತ ಸಂಯೋಜನೆ ನೀಡಿದ್ದು ವೆಂಕಿ ಸಂಕಲನ ವಿನ್ನರ್ ಮೂರ್ತಿ ಛಾಯಾಗ್ರಹಣವಿದೆ. ನಿರ್ದೇಶಕ ಮಾಚಂದ್ರು ಅವರೇ ಈ ಸಿನಿಮಾ ನಿರ್ಮಾಣ ಮಾಡಿದ್ದು, ವಡಿವೇಲು ಗೋವಿಂದಸ್ವಾಮಿ ಮತ್ತು ಶಂಕರ್ ಸಹ ನಿರ್ಮಾಪಕರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular