HomeKarnatakaತಮಿಳುನಾಡಿಗೆ ಸದ್ದಿಲ್ಲದೇ ಕಾವೇರಿ ನೀರು ಹರಿಸಿದ ಸರ್ಕಾರ; ಡಿಎಂಕೆ ಜೊತೆ ಸೀಟು ಹಂಚಿಕೆ ಕುದುರಿಸಲು ಡೀಲ್;...

ತಮಿಳುನಾಡಿಗೆ ಸದ್ದಿಲ್ಲದೇ ಕಾವೇರಿ ನೀರು ಹರಿಸಿದ ಸರ್ಕಾರ; ಡಿಎಂಕೆ ಜೊತೆ ಸೀಟು ಹಂಚಿಕೆ ಕುದುರಿಸಲು ಡೀಲ್; ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಬೆಂಗಳೂರಿನ ಜನ ಇಲ್ಲಿ ಹನಿ ನೀರಿಗೂ ಪರದಾಡುತ್ತಿದ್ದರೆ, ಅಲ್ಲಿ ಸದ್ದಿಲ್ಲದೆ ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸುತ್ತಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನೀರಿನ ಅಭಾವ ಇದ್ದರೆ ಟ್ಯಾಂಕರ್ ಮಾಫಿಯಾ ಮೂಲಕ ಇನ್ನಷ್ಟು ಲೂಟಿ ಹೊಡೆಯಬಹುದು ಎನ್ನುವ ಹುನ್ನಾರವೇನಾದರೂ ನಡೆದಿದೆಯೇ ಸಿಎಂ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.

ಅಥಾವಾ ತಮಿಳುನಾಡಿನ I.N.D.I ಮಿತ್ರ ಪಕ್ಷ ಡಿಎಂಕೆ ಜೊತೆ ಸೀಟು ಹಂಚಿಕೆ ಕುದುರಿಸಲು ಕಾವೇರಿ ನೀರು ಹಂಚಿಕೆಯ ಡೀಲ್ ನಡೆದಿದೆಯೋ ಡಿಸಿಎಂ
ಡಿ.ಕೆ.ಶಿವಕುಮಾರ್ ಅವರೇ? ಎಂದು ಕೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯ ಕಾಂಗ್ರೆಸ್ ಸರ್ಕಾರ ಸದ್ದಿಲ್ಲದೇ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ವಿಡಿಯೋ ಹಂಚಿಕೊಂಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular