HomeEntertainment'ನಾ ನಿನ್ನ ಬಿಡಲಾರೆ' ಚಿತ್ರದ ಟೀಸರ್ ರಿಲೀಸ್

‘ನಾ ನಿನ್ನ ಬಿಡಲಾರೆ’ ಚಿತ್ರದ ಟೀಸರ್ ರಿಲೀಸ್

ನವೀನ್ ಜಿಎಸ್ ನಿರ್ದೇಶನದ ಅಂಬಲಿ ಭಾರತಿ ಅಭಿನಯದ ‘ನಾ ನಿನ್ನ ಬಿಡಲಾರೆ’ ಚಿತ್ರದ ಟೀಸರ್ ನಿನ್ನೆ ಯಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರಲ್ಲಿ ಕುತೂಹಲ ಕೆರಳಿಸಿದೆ. ನಟ ಶರಣ್ ಈ ಟೀಸರ್ ರಿಲೀಸ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಮಲಾ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಶ್ರೀಮತಿ ಭಾರತಿ ಬಾಳಿ ನಿರ್ಮಾಣ ಮಾಡಿದ್ದು, ಅಂಬಲಿ ಭಾರತಿ ಸೇರಿದಂತೆ ಪಂಚಿ, ಕೆ ಎಸ್ ಶ್ರೀಧರ್, ಶ್ರೀನಿವಾಸ ಪ್ರಭು, ಹರಿಣಿ ಶ್ರೀಕಾಂತ್, ಸೀರುಂಡೆ ರಘು, ಮಹಾಂತೇಶ್, ಲಕ್ಷ್ಮಿ ಸಿದ್ದಯ್ಯ, ಮಂಜುಳಾ ರೆಡ್ಡಿ, ನಾಗರಾಜ್ ರಾವ್ ಬಣ್ಣ ಹಚ್ಚಿದ್ದಾರೆ. ಎಂ ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ನೀಡಿದ್ದು, ದೀಪಕ್ ಎಸ್ ಸಂಕಲನ, ವೀರೇಶ್ ಛಾಯಾಗ್ರಹಣ, ಹಾಗೂ ಡಿಫ್ರೆಂಟ್ ಡ್ಯಾನಿ ಮತ್ತು ನರಸಿಂಹ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular