HomeLatest Newsಎರಡು ದಶಕಗಳ ಬಳಿಕ ಕೋಲ್ಕತ್ತಾಗೆ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಮರಳುವಿಕೆ

ಎರಡು ದಶಕಗಳ ಬಳಿಕ ಕೋಲ್ಕತ್ತಾಗೆ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಮರಳುವಿಕೆ

ಕೋಲ್ಕತ್ತಾ- ಸುಮಾರು ಎರಡು ದಶಕಗಳ (ಸುಮಾರು 19-20 ವರ್ಷಗಳ) ದೀರ್ಘ ವಿರಾಮದ ನಂತರ ಬಾಂಗ್ಲಾದೇಶದ ವಿವಾದಿತ ಲೇಖಕಿ ಹಾಗೂ ಕಾರ್ಯಕರ್ತೆ ತಸ್ಲೀಮಾ ನಸ್ರೀನ್ ಅವರು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾಗೆ ಮರಳುತ್ತಿದ್ದಾರೆ.

ಕೋಲ್ಕತ್ತಾದ ರವೀಂದ್ರ ಸದನ್‌ನಲ್ಲಿ ಆಗಸ್ಟ್ 1 ರಂದು ಹಮ್ಮಿಕೊಳ್ಳಲಾಗಿರುವ ವಿಶೇಷ ಸಾಹಿತ್ಯಿಕ ಹಾಗೂ ಮೂಲಭೂತವಾದ ವಿರೋಧಿ ಸಮಾರಂಭದಲ್ಲಿ ಭಾಗವಹಿಸಲು ಅವರು ಸಜ್ಜಾಗಿದ್ದಾರೆ. ಈ ಐತಿಹಾಸಿಕ ಬೆಳವಣಿಗೆಯು ಬಂಗಾಳದ ರಾಜಕೀಯ ಮತ್ತು ಸಾಹಿತ್ಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಸ್ಲೀಮಾ ನಸ್ರೀನ್ ಯಾರು?

ತಸ್ಲೀಮಾ ನಸ್ರೀನ್ ಯಾರು?

ತಸ್ಲೀಮಾ ನಸ್ರೀನ್ ಅವರು ಬಾಂಗ್ಲಾದೇಶದ ಪ್ರಖ್ಯಾತ ಲೇಖಕಿ, ಕವಿಯತ್ರಿ ಮತ್ತು ಸ್ತ್ರಿವಾದಿ ಚಿಂತಕಿ. ಇವರು ಬರೆಯುವ ಕೃತಿಗಳು ಮತ್ತು ವಿಚಾರಗಳು ಧಾರ್ಮಿಕ ಮೂಲಭೂತವಾದ, ಪುರುಷಪ್ರಧಾನ ವ್ಯವಸ್ಥೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಪ್ರಶ್ನಿಸುತ್ತವೆ. ತಮ್ಮ ಬರವಣಿಗೆಯ ಕಾರಣದಿಂದಲೇ ದಶಕಗಳಿಂದ ಸ್ವದೇಶದಿಂದ ಹೊರಗುಳಿದು ಅಜ್ಞಾತವಾಸ ಹಾಗೂ ಗಡೀಪಾರು ಜೀವನ ನಡೆಸುತ್ತಿದ್ದಾರೆ.

ಹುಟ್ಟು ಮತ್ತು ಆರಂಭಿಕ ಜೀವನ

ಹಿನ್ನೆಲೆ ಏನು?ಹುಟ್ಟು ಮತ್ತು ಆರಂಭಿಕ ಜೀವನ:

ತಸ್ಲೀಮಾ ನಸ್ರೀನ್ ಅವರು ಬಾಂಗ್ಲಾದೇಶದ ಮೈಮನ್ಸಿಂಗ್‌ನಲ್ಲಿ 1962ರಲ್ಲಿ ಜನಿಸಿದರು. ಮೂಲತಃ ವೈದ್ಯೆಯಾಗಿದ್ದ ಇವರು, ನಂತರ ಪೂರ್ಣ ಪ್ರಮಾಣದ ಸಾಹಿತ್ಯ ಮತ್ತು ಪತ್ರಿಕೋದ್ಯಮವನ್ನು ಅಪ್ಪಿಕೊಂಡರು.

1990ರ ದಶಕದ ಆರಂಭದಲ್ಲಿ ಅವರು ಬರೆದ ‘ಲಜ್ಜಾ’ (Lajja) ಕಾದಂಬರಿಯು ಬಾಂಗ್ಲಾದೇಶದಲ್ಲಿ ಕೋಮು ಸಂಘರ್ಷ ಮತ್ತು ತೀವ್ರ ವಿವಾದಕ್ಕೆ ಕಾರಣವಾಯಿತು. ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳಿಂದ ತೀವ್ರ ಬೆದರಿಕೆಗಳು ಎದುರಾದ ಹಿನ್ನೆಲೆಯಲ್ಲಿ ಅವರು 1994ರಲ್ಲಿ ಬಾಂಗ್ಲಾದೇಶ ತೊರೆಯಬೇಕಾಯಿತು.

ಭಾರತದಲ್ಲಿ ಆಶ್ರಯ

ಭಾರತದಲ್ಲಿ ಆಶ್ರಯ

2004ರಿಂದ ಭಾರತದಲ್ಲಿ ನೆಲೆಸಿರುವ ಇವರು, ಸ್ವೀಡನ್ ಸೇರಿದಂತೆ ವಿವಿಧ ದೇಶಗಳ ನಾಗರಿಕತ್ವ/ಪಾಸ್‌ಪೋರ್ಟ್ ಹೊಂದಿದ್ದರೂ, ಬಂಗಾಳಿ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಒಲವಿನಿಂದ ಭಾರತದಲ್ಲೇ ಉಳಿದುಕೊಳ್ಳಲು ಹೆಚ್ಚು ಬಯಸಿದ್ದಾರೆ.

ವಿವಾದ ಉಂಟಾಗಿದ್ದು ಹೇಗೆ?

ವಿವಾದ ಉಂಟಾಗಿದ್ದು ಯಾಕೆ?’

2000ರ ದಶಕದ ಮಧ್ಯಭಾಗದಲ್ಲಿ ಕೋಲ್ಕತ್ತಾವನ್ನು ತಮ್ಮ ನೆಲೆಸುವ ತಾಣವನ್ನಾಗಿ ಮಾಡಿಕೊಂಡಿದ್ದ ತಸ್ಲೀಮಾ ನಸ್ರೀನ್ ಅವರ ‘ದ್ವಿಖಂಡಿತೋ’ (Dwikhondito) ಆತ್ಮಕಥೆಯು ಭಾರೀ ವಿವಾದ ಸೃಷ್ಟಿಸಿತು. ಈ ಪುಸ್ತಕವು ಕೆಲವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ 2003ರಲ್ಲಿ ಅಂದಿನ ಎಡರಂಗ (Left Front) ಸರ್ಕಾರವು ಇದರ ಮೇಲೆ ಅನಧಿಕೃತ ನಿಷೇಧ ಹೇರಿತು.

ನಸ್ರೀನ್ ಅವರ ಬರವಣಿಗೆಯನ್ನು ವಿರೋಧಿಸಿ 2007ರ ನವಂಬರ್‌ನಲ್ಲಿ ಕೋಲ್ಕತ್ತಾದಲ್ಲಿ ತೀವ್ರ ಸ್ವರೂಪದ ಹಿಂಸಾತ್ಮಕ ಪ್ರತಿಭಟನೆಗಳು ಹಾಗೂ ಗಲಭೆಗಳು ಭ್ಡಿಕೊಂಡವು. ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲವಾದ ಅಂದಿನ ಎಡರಂಗ ಸರ್ಕಾರವು, ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಮೂಲಭೂತವಾದಿಗಳ ಒತ್ತಡಕ್ಕೆ ಮಣಿದು ತಸ್ಲೀಮಾ ಅವರನ್ನು ಕೋಲ್ಕತ್ತಾದಿಂದ ಬಲವಂತವಾಗಿ ದೆಹಲಿಗೆ ಸ್ಥಳಾಂತರಿಸಿತು. ಅಂದಿನಿಂದ ಅವರಿಗೆ ಕೋಲ್ಕತ್ತಾ ಪ್ರವೇಶಿಸದಂತೆ ಅಘೋಷಿತ ನಿರ್ಬಂಧವಿತ್ತು.

ಆಗಮನಕ್ಕೆ ವಿರೋಧ ಏಕೆ?

ಆಗಮನಕ್ಕೆ ವಿರೋಧ ಏಕೆ?

ರಾಜಕೀಯ ಮತ್ತು ಧಾರ್ಮಿಕ ಆಕ್ರೋಶ: ಪ್ರಸ್ತುತ ಬಂಗಾಳದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರದ ಬೆಂಬಲದೊಂದಿಗೆ ತಸ್ಲೀಮಾ ಕೋಲ್ಕತ್ತಾಗೆ ಮರಳುತ್ತಿರುವುದು ಕೆಲ ವಿರೋಧ ಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಉದ್ರೇಕಕಾರಿ ಹೇಳಿಕೆಗಳ ಆರೋಪ:

ತೃಣಮೂಲ ಕಾಂಗ್ರೆಸ್ (TMC) ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ (ISF) ನಾಯಕರು, “ತಸ್ಲೀಮಾ ನಸ್ರೀನ್ ಅವರು ಇಸ್ಲಾಂ ಧರ್ಮ, ಶರಿಯತ್ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ನಿರಂತರವಾಗಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ” ಎಂದು ಆರೋಪಿಸಿದ್ದಾರೆ.

ಮುಂಬರುವ ರಾಜಕೀಯ ಬೆಳವಣಿಗೆಗಳ ದೃಷ್ಟಿಯಿಂದ ಹಾಗೂ ನಿರ್ದಿಷ್ಟ ಸಮುದಾಯಗಳ ಧ್ರವೀಕರಣಕ್ಕಾಗಿ ಬಿಜೆಪಿ ಸರ್ಕಾರವು ಈ ಭೇಟಿಯನ್ನು ಪ್ರಾಯೋಜಿಸುತ್ತಿದೆ ಎಂದು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ.

ತಸ್ಲೀಮಾ ಅವರ ಭಾವನೆಗಳೇನು?

ಸುಮಾರು ಎರಡು ದಶಕಗಳ ಬಳಿಕ ಕೋಲ್ಕತ್ತಾಗೆ ಕಾಲಿಡುತ್ತಿರುವ ತಸ್ಲೀಮಾ ನಸ್ರೀನ್, “ಬಾಂಗ್ಲಾದೇಶದಲ್ಲಿ ಜಾತ್ಯತೀತ ಚಿಂತನೆಗೆ ಅವಕಾಶಗಳು ಅಪಾಯಕಾರಿಯಾಗಿ ಕುಗ್ಗುತ್ತಿವೆ.

ಬಂಗಾಳದ ಗಡಿಗಳು ನನ್ನ ಹೃದಯವನ್ನು ವಿಭಜಿಸಲು ಸಾಧ್ಯವಿಲ್ಲ, ಇಲ್ಲಿಗೆ ಮರಳುತ್ತಿರುವುದು ಸ್ವಂತ ಮನೆಗೆ ಬಂದ ಅನುಭವ ನೀಡಿದೆ” ಎಂದು ಭಾವುಕರಾಗಿ ನುಡಿದಿದ್ದಾರೆ. ಈ ಬೆಳವಣಿಗೆಯು ಬೌದ್ಧಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಾಜಕೀಯ ಧ್ರುವೀಕರಣದ ನಡುವಿನ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular