HomeLatest Newsಕಾವೇರಿ ಕಿಚ್ಚು: ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಆಗುವವರೆಗೂ ತಮಿಳುನಾಡಿಗೆ ನೀರು ಬಿಡಲ್ಲ: ಸಚಿವ ರಾಮಲಿಂಗಾರೆಡ್ಡಿ

ಕಾವೇರಿ ಕಿಚ್ಚು: ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಆಗುವವರೆಗೂ ತಮಿಳುನಾಡಿಗೆ ನೀರು ಬಿಡಲ್ಲ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ಕ್ಷಣ ಕ್ಷಣಕ್ಕೂ ಪ್ರತಿಭಟನೆಗಳು ಹೆಚ್ಚುತ್ತಿವೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹನಿ ನೀರು ಬಿಡಬಾರದು ಎಂದು ರೈತರು, ಕನ್ನಡಪರ ಸಂಘಟನೆಗಳು, ವಿಪಕ್ಷ ಬಿಜೆಪಿ ನಾಯಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ನಡುವೆ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಆಗೋವವರೆಗೂ ತಮಿಳುನಾಡಿಗೆ ನೀರು ಬಿಡಲ್ಲ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ತಮಿಳುನಾಡಿಗೆ 15 ದಿನಗಳ ಕಾಲ 3,500 ಕ್ಯೂಸೆಕ್‌ ನೀರು ಹರಿಸಬೇಕೆಂಬ CWMA ಆದೇಶ ನೀಡಿದೆ. ಸದ್ಯಕ್ಕೆ ಕುಡಿಯೋ ನೀರಿಗೆ ಸಮಸ್ಯೆಯಿಲ್ಲ, ಆದರೆ ರೈತರಿಗೆ ಬೆಳೆ ಬೆಳೆಯೋಕೆ ನೀರು ಕೊಡಲು ಆಗುವುದಿಲ್ಲ. ತಮಿಳುನಾಡಿನಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ 40 ಟಿಎಂಸಿ ನೀರಿದೆ. ಆದರೆ ನಮ್ಮಲ್ಲಿ ಬರಗಾಲವಿರುವುದರಿಂದ ಈಬಾರಿ ನೀರು ಬಿಡಲು ಆಗುವುದಿಲ್ಲ. ಮಳೆ ಬಂದರೆ ಸಮಸ್ಯೆ ಆಗುತ್ತಿರಲಿಲ್ಲ. ಮಳೆ ಇಲ್ಲ ಹಾಗಾಗಿ ಸಮಸ್ಯೆಯಾಗಿದೆ ಎಂದರು.

CWMA ನೀರು ಬಿಡೋಕೆ ಹೇಳಿದೆ. ಕಳೆದ 30 ವರ್ಷಗಳಿಂದ ವಾದ ಮಾಡಿದ್ದವರೇ ಈಗಲೂ ವಾದ ಮಾಡಿದ್ದಾರೆ. ಇನ್ನೂ ಭಾನುವಾರ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ. ವಿಪಕ್ಷಗಳ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡ್ತೀವಿ. ಸಭೆ ಆಗೋವರೆಗೂ ನೀರು ಬಿಡಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೂ ಬಿಜೆಪಿ ಪ್ರತಿಭಟನೆ ಮಾಡೋ ಅವಶ್ಯಕತೆ ಇರಲಿಲ್ಲ. ನಾವು ರೈತರ ಹಿತಾಸಕ್ತಿ ಗಮನ ಇಟ್ಟುಕೊಂಡು ಮೇಲ್ಮನವಿ ಹೋಗಿದ್ದು, ಸರ್ವಪಕ್ಷಗಳ ಸಭೆ ಕರೆದಿದ್ದೇವೆ. ನೆಲ, ಜಲ, ಭಾಷೆ ಬಂದಾಗ ಒಟ್ಟಾಗಿ ಹೋಗಬೇಕು. ನಾವು ಬಿಜೆಪಿಗೆ ಹಿಂದೆ ಸಹಕಾರ ಮಾಡಿದ್ವಿ. ಮುಂದೆ ಏನ್ ಮಾಡಬೇಕು ಅಂತ ವಿಪಕ್ಷಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ. ವರ್ಷಕ್ಕೆ 40 TMC ನೀರು ಕುಡಿಯೋಕೆ ಬೇಕು. ಮಳೆ ಬಂದರೆ ಸಮಸ್ಯೆ ಇರೊಲ್ಲ. ಕಳೆದ ವರ್ಷ ಮಳೆ ಬಂದಿತ್ತು ಏನೂ ಸಮಸ್ಯೆ ಆಗಿಲ್ಲ. ಈ ವರ್ಷ ಮಳೆ ಕಡಿಮೆ ಇದೆ. ಸ್ವಲ್ಪ ಮಳೆ ಬಂದಿದ್ದು ನಮಗೆ ಅನುಕೂಲ ಆಗಿತ್ತು. ಮೆಟ್ಟೂರು ಡ್ಯಾಂನಲ್ಲಿ ನೀರು ಇದೆ. ಅವರಿಗೆ ಕುಡಿಯೋ ನೀರಿಗೆ ಸಮಸ್ಯೆ ಇಲ್ಲ. ರಾಜ್ಯಕ್ಕೆ ತಮಿಳುನಾಡು ಸಿಎಂ ವಿಜಯ್ ಬರ್ತಾರೆ. ಈ ವಿಚಾರವೂ ಚರ್ಚೆ ಆಗುತ್ತದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular