HomeLatest Newsಕಾಂಡೋಮ್ ಫ್ಯಾಕ್ಟರಿಯ ಒಡತಿ ಈ ಬಿಗ್ ಬಾಸ್ ಸುಂದರಿ: ಟ್ರೋಲ್ ಮಾಡಿದವರಿಗೆ ತಾನ್ಯಾ ಮಿತ್ತಲ್ ಕೊಟ್ಟ...

ಕಾಂಡೋಮ್ ಫ್ಯಾಕ್ಟರಿಯ ಒಡತಿ ಈ ಬಿಗ್ ಬಾಸ್ ಸುಂದರಿ: ಟ್ರೋಲ್ ಮಾಡಿದವರಿಗೆ ತಾನ್ಯಾ ಮಿತ್ತಲ್ ಕೊಟ್ಟ ಶಾಕ್ ಅಷ್ಟಿಷ್ಟಲ್ಲ!

ಬಿಗ್ ಬಾಸ್ 19ರ ಸ್ಪರ್ಧಿ ತಾನ್ಯಾ ಮಿತ್ತಲ್ ಅವರು ತಮ್ಮ ಐಷಾರಾಮಿ ಜೀವನ ಮತ್ತು ಉದ್ಯಮಗಳ ಬಗ್ಗೆ ಹಂಚಿಕೊಂಡಾಗ ಅನೇಕರು ಅದನ್ನು ಸುಳ್ಳು ಎಂದು ಅಪಹಾಸ್ಯ ಮಾಡಿದ್ದರು. ತಾನ್ಯಾ ಅವರು ನಿಜವಾಗಿಯೂ ಕಂಪನಿಗಳ ಒಡೆಯಿಯೇ ಅಥವಾ ಸುಳ್ಳು ಹೇಳುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿದ್ದವು. ಇದೀಗ ತಾನ್ಯಾ ಮಿತ್ತಲ್ ಗ್ವಾಲಿಯರ್‌ನಲ್ಲಿರುವ ತಮ್ಮ ಕಾಂಡೋಮ್ ಉತ್ಪಾದನಾ ಕಾರ್ಖಾನೆಯ ವಿಡಿಯೋ ಹಂಚಿಕೊಳ್ಳುವ ಮೂಲಕ ಟ್ರೋಲರ್‌ಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

ವಿದೇಶಿ ಯಂತ್ರೋಪಕರಣಗಳು ಮತ್ತು ಗುಣಮಟ್ಟಕ್ಕೆ ಆದ್ಯತೆ

ತಮ್ಮ ಫ್ಯಾಕ್ಟರಿಯ ಪ್ರವಾಸ ಮಾಡಿಸಿದ ತಾನ್ಯಾ, ಅಲ್ಲಿನ ಕೆಲಸಗಾರರು ಮತ್ತು ಉತ್ಪಾದನಾ ಹಂತಗಳನ್ನು ವಿವರಿಸಿದ್ದಾರೆ. “ನಮ್ಮಲ್ಲಿ ಉನ್ನತ ದರ್ಜೆಯ ವಿದೇಶಿ ಯಂತ್ರೋಪಕರಣಗಳನ್ನು ಬಳಸಲಾಗುತ್ತದೆ. ಕಾಂಡೋಮ್ ಉತ್ಪಾದನೆ ಎಂದರೆ ಜನ ಮಾತನಾಡಲು ಹಿಂಜರಿಯುತ್ತಾರೆ, ಆದರೆ ಇದು ಸಮಾಜಕ್ಕೆ ಅಗತ್ಯವಾದ ಒಂದು ಉದ್ದಿಮೆ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅಲ್ಲಿನ ಲ್ಯಾಬ್‌ಗಳನ್ನು ತೋರಿಸಿ, ಪ್ರತಿ ಉತ್ಪನ್ನವನ್ನೂ ಕಟ್ಟುನಿಟ್ಟಾದ ಪರೀಕ್ಷೆಗೆ ಒಳಪಡಿಸಿದ ನಂತರವೇ ಹೊರಬಿಡಲಾಗುವುದು ಎಂದು ವಿವರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನ್ನನ್ನು ‘ಫೇಕ್’ ಅಂದವರಿಗೆ ಇದು ಉತ್ತರ

ಬಿಗ್ ಬಾಸ್ ಮನೆಯಲ್ಲಿದ್ದಾಗ ಸಹ ಸ್ಪರ್ಧಿಗಳು ಮಾತ್ರವಲ್ಲದೆ, ನಿರೂಪಕ ಸಲ್ಮಾನ್ ಖಾನ್ ಕೂಡ ತಾನ್ಯಾ ಅವರ ಉದ್ಯಮಗಳ ಬಗ್ಗೆ ತಮಾಷೆ ಮಾಡಿದ್ದರು. ಇದರಿಂದ ಬೇಸರಗೊಂಡಿದ್ದ ತಾನ್ಯಾ, “ಮನೆಯಲ್ಲಿದ್ದಾಗ ನನ್ನನ್ನು ಎಲ್ಲರೂ ಟಾರ್ಗೆಟ್ ಮಾಡಿದರು. ನನ್ನನ್ನು ಬೆಂಬಲಿಸಿದ ಅಭಿಮಾನಿಗಳನ್ನು ಕೂಡ ‘ಫೇಕ್ ಗರ್ಲ್’ ಬೆಂಬಲಿಸುತ್ತಿದ್ದೀರಿ ಎಂದು ಕೆಣಕಲಾಯಿತು. ಅಂತಹ ಅಭಿಮಾನಿಗಳಿಗಾಗಿ ನಾನು ಇಂದು ಈ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ” ಎಂದು ಭಾವುಕರಾಗಿ ನುಡಿದಿದ್ದಾರೆ.

ಬಾಕಿ ಉಳಿದಿಲ್ಲ ಸಂಬಳ!

ಫ್ಯಾಕ್ಟರಿ ಕೆಲಸಗಾರರು ಕೂಡ ತಾನ್ಯಾ ಅವರೇ ತಮ್ಮ ಬಾಸ್ ಎಂದು ದೃಢಪಡಿಸಿದ್ದು, ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸಂಬಳ ನೀಡುತ್ತಾರೆ ಎಂದು ತಿಳಿಸಿದ್ದಾರೆ. ಕೇವಲ ಫಾರ್ಮಾಸ್ಯುಟಿಕಲ್ ಮಾತ್ರವಲ್ಲದೆ ಸೋಲಾರ್ ಕಂಪನಿ ಮತ್ತು ಆರ್ಗಾನಿಕ್ ಫಾರ್ಮ್ ಹೌಸ್ ಕೂಡ ತಾನ್ಯಾ ಒಡೆತನದಲ್ಲಿದೆ ಎಂಬುದು ಈಗ ಸಾಬೀತಾಗಿದೆ. ಸದ್ಯ ಬಿಗ್ ಬಾಸ್ 19ರ ರನ್ನರ್ ಅಪ್ ಆಗಿ ಹೊರಬಂದಿರುವ ತಾನ್ಯಾ, ಉದ್ಯಮ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular