ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಬದಲಾವಣೆ ಮಾಡಿರುವುದಕ್ಕೆ ನಮ ಅಭ್ಯಂತರ ಇಲ್ಲ. ಕೇಂದ್ರ ಸರ್ಕಾರ ಬಯಸುವುದಾದರೆ ನಾಥುರಾಮ್ ಗೋಡ್ಸೆ ಹೆಸರನ್ನೇ ನಾಮಕರಣ ಮಾಡಿಕೊಳ್ಳಲಿ. ಆದರೆ ಗ್ರಾಮೀಣ ಭಾಗದಲ್ಲಿ ಉದ್ಯೊ?ಗ ಸೃಷ್ಟಿ ಮಾಡಲಿ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಮಹಾತ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸರಿಳೀಕರಿಸಿರುವುದಾಗಿ ಹೇಳಿರುವ ಕೇಂದ್ರ ಸರ್ಕಾರ ವಿಕಸಿತ್ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಅಭಿಯಾನ ಗ್ರಾಮೀಣ (ವಿ.ಬಿ.ಜಿ.ಆರ್.ಎ.ಎಂ.ಜಿ-ವಿಬಿ ಐ ರಾಮ್ ಜಿ) ಕಾಯ್ದೆಯನ್ನು ರೂಪಿಸಲಾಗಿದೆ. ಈ ಕಾಯಿದೆ ಮಹಾತ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯ ಯಥಾವತ್ತು ರೂಪವಾಗಿದೆ. ಆದರೆ ಜನರ ಹಕ್ಕುಗಳನ್ನು ಕಸಿಯುವಂತೆ ಮಾರ್ಪಾಡು ಮಾಡಲಾಗಿದೆ ಎಂದು ದೂರಿದರು.
ಗ್ರಾಮೀಣ ಜನರ ಜೀವನೋಪಾಯ, ಪಂಚಾಯಿತಿಗಳ ಅಧಿಕಾರ ಮತ್ತು ರಾಜ್ಯ ಸರ್ಕಾರಗಳ ಸ್ವಾಯತ್ತತೆಗೆ ಕಾಯ್ದೆಯಿಂದ ಧಕ್ಕೆಯಾಗಿದೆ. ಬೇಡಿಕೆ ಆಧಾರಿತ ಮಾದರಿಯಿಂದ ಪೂರೈಕೆ ಆಧರಿತ ವ್ಯವಸ್ಥೆಗೆ ಯೋಜನೆಯನ್ನು ಬದಲಾಯಿಸಲಾಗಿದೆ. ಈ ಮೊದಲು ಉದ್ಯೋಗ ಕಾರ್ಡ್ ಹೊಂದಿದವರು ದೇಶದ ಯಾವ ಭಾಗದಲ್ಲಾದರೂ ಹೋಗಿ ಕೆಲಸ ಮಾಡಬಹುದಿತ್ತು. ಹೊಸ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ಗುರುತಿಸಿದ ಅಥವಾ ನೋಟಿಫೈ ಮಾಡಿದ ಪ್ರದೇಶದಲ್ಲಿ ಮಾತ್ರ ಕೆಲಸ ಮಾಡಬೇಕಾಗಿದೆ. ಈ ಮೊದಲು ಕೂಲಿ ಹಣ ಪಂಚಾಯಿತಿಗಳಿಗೆ ನೇರವಾಗಿ ಬಿಡುಗಡೆಯಾಗುತ್ತಿತ್ತು ಈಗ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರ ಕೊರತೆಯಾಗದಂತೆ ಮತ್ತು ಕೂಲಿಯ ದರ ಹೆಚ್ಚಳವಾಗುವುದನ್ನು ತಡೆಯಲು ವರ್ಷದಲ್ಲಿ 60 ದಿನ ಉದ್ಯೊ?ಗ ಖಾತ್ರಿ ಕೆಲಸಗಳಿಗೆ ರಜೆ ನೀಡುವುದಾಗಿ ಹೊಸ ಕಾಯ್ದೆಯಲ್ಲಿ ತಿಳಿಸಲಾಗಿದೆ. ಭೂ ಮಾಲೀಕರ ಜಮೀನುಗಳಲ್ಲಿ ಕೆಲಸ ಮಾಡಲು ಇಚ್ಚಿಸದೆ ಇದ್ದವರಿಗೆ ಇನ್ನು ಮುಂದೆ ಅನ್ಯ ಮಾರ್ಗ ಇಲ್ಲದೆ, ಬಲ್ಲಾಢ್ಯರು ಕೊಟ್ಟಷ್ಟು ಕೂಲಿಗೆ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ವಿವರಿಸಿದ್ದರು.
ಕೇಂದ್ರ ಸರ್ಕಾರ ಈ ಮೊದಲು ಉದ್ಯೊ?ಗ ಖಾತ್ರಿಯ ಸಂಪೂರ್ಣ ಕೂಲಿಯನ್ನು ಪಾವತಿ ಮಾಡುತ್ತಿತ್ತು. ಇನ್ನು ಮುಂದೆ ಶೇ.60ರಷ್ಟು ಮಾತ್ರ ಪಾವತಿಸಲಿದೆ. ರಾಜ್ಯ ಸರ್ಕಾರ ಶೇ.40ರಷ್ಟು ವೆಚ್ಚವನ್ನು ಭರಿಸಬೇಕಿದೆ. ಕೇಂದ್ರ ಸರ್ಕಾರದ ಯೋಜನೆಗಳಿಗೆಲ್ಲ ರಾಜ್ಯದ ಪಾಲಿನ ವೆಚ್ಚವನ್ನು ಹೆಚ್ಚಳ ಮಾಡಲಾಗುತ್ತಿದೆ. ವಿಕಸಿತ ಭಾರತ ಮತ್ತು ಆರ್ಥಿಕವಾಗಿ ಸದೃಢವಾಗಿರುವ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವವರಿಗೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಪೂರ್ಣ ಪ್ರಮಾಣದ ಅನುದಾನ ಒದಗಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕದ ಮೇಲೆ ಹೆಚ್ಚಿನ ಆರ್ಥಿಕ ಹೊರೆಯಾಗುವಂತಹ ಬದಲಾವಣೆಯನ್ನು ಯೋಜನೆಯಲ್ಲಿ ರೂಪಿಸಲಾಗಿದೆ. ಶೇ.40ರಷ್ಟು ವೆಚ್ಚ ಭರಿಸಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರದ ಜೊತೆಗಾಗಲಿ ಅಥವಾ ಕೇಂದ್ರ ಹಣಕಾಸು ಆಯೋಗದೊಂದಿಗಾಗಲಿ ಯಾವುದೇ ಚರ್ಚೆಗಳಾಗಿಲ್ಲ. ಮೋದಿಯವರಿಗೆ ರಾತ್ರಿ ಕನಸು ಬೀಳುತ್ತದೆ ಬೆಳಗ್ಗೆ ಕಾನೂನು ರೂಪಿತವಾಗುತ್ತದೆ. ರಾಜ್ಯ ಸರ್ಕಾರಗಳು ಅದಕ್ಕೆ ತಲೆಯಾಡಿಸಬೇಕಿದೆ. ಇದು ರಾಜ್ಯಗಳ ಅಧಿಕಾರ ಮೊಕಟುಕೊಳಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ನಮ ತೆರಿಗೆ ಬೇಕು, ಇಲ್ಲಿನ ಪ್ರತಿಭೆ, ಮಾನವ ಸಂಪನೂಲ ಮತ್ತು ದುಡಿಮೆ ಬೇಕು. ಆದರೆ ಯೋಜನೆಗಳಿಗೆ ನೆರವು ನೀಡಲು ಮಾತ್ರ ಹಿಂದೇಟು ಹಾಕಲಾಗುತ್ತಿದೆ ಎಂದು ದೂರಿದರು.
ಉದ್ಯೊ?ಗ ಖಾತ್ರಿಯಲ್ಲಿ ಕಳೆದ ಎರಡೂವರೆ ವರ್ಷದಲ್ಲಿ 17 ಲಕ್ಷ ಆಸ್ತಿಗಳನ್ನು ಸೃಷ್ಟಿಸಲಾಗಿದೆ. 80 ಲಕ್ಷ ಕುಟುಂಬಗಳ ಜೀವನೋಪಾಯಕ್ಕೆ ನೆರವಾಗಿದೆ. 21,146 ಕೋಟಿ ರೂಪಾಯಿಗಳು ಖರ್ಚಾಗಿದೆ. ತಿದ್ದುಪಡಿ ಗ್ರಾಮೀಣ ಭಾಗದ ಉದ್ಯೊ?ಗಾವಕಾಶಗಳನ್ನು ಕಸಿಯುತ್ತಿದೆ ಎಂದು ವಿವರಿಸಿದರು.
ಎರಡು ಕೋಟಿ ಉದ್ಯೊ?ಗ ನೀಡುವುದಾಗಿ ಹೇಳಿದ ನರೇಂದ್ರ ಮೋದಿಯವರು ಈಗ ಇರುವ ಅವಕಾಶಗಳನ್ನೆ? ಹಾಳು ಮಾಡುತ್ತಿದ್ದಾರೆ. ಯಾವುದೇ ತಂತ್ರಜ್ಞಾನವಾದರೂ ಯೋಜನೆಯ ಬಲವನ್ನು ಹೆಚ್ಚಿಸಬೇಕು. ಆದರೆ ಉದ್ಯೊ?ಗ ಖಾತ್ರಿಗೆ ಅಳವಡಿಸುತ್ತಿರುವ ತಂತ್ರಜ್ಞಾನಗಳು ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡುತ್ತಿವೆ. ಆಧಾರ ಸಂಖ್ಯೆ ಜೋಡಣೆಗೊಂಡಿರುವ ಕೂಲಿ ಪಾವತಿ ವ್ಯವಸ್ಥೆಯಿಂದ ದೇಶದಲ್ಲಿ ಶೇ.29 ರಷ್ಟು ಮಂದಿಗೆ ಮಾತ್ರ ಕೂಲಿ ಪಾವತಿಯಾಗಿದೆ. ಶೇ.69ರಷ್ಟು ಜನ ಕೂಲಿ ದೊರೆಯದೆ ಪರದಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವರದಿಯೇ ಸ್ಪಷ್ಟಪಡಿಸಿದೆ. ಆದರೂ ಉದ್ಯೋಗ ಖಾತ್ರಿಗೆ ಅನಗತ್ಯವಾದ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ದೂರಿದರು.
ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಇನ್ನು ಮುಂದೆ ಪಂಚಾಯಿತಿಗಳಲ್ಲದೆ, ದೆಹಲಿಯಲ್ಲಿ ಕುಳಿತವರು ನಿರ್ಧರಿಸಬೇಕಿದೆ. ಪಿಎಂ ಗತಿಶಕ್ತಿ ಡ್ಯಾಶ್ ಬೋರ್ಡ್ ನೊಂದಿಗೆ ಜೋಡಣೆ ಮಾಡಿರುವುದರಿಂದ ಸಂಪೂರ್ಣ ಅಧಿಕಾರ ಪಂಚಾಯಿತಿಗಳಿಂದ ಕೈತಪ್ಪಿ ಹೋಗುತ್ತದೆ. ಜನ ಭವಿಷ್ಯದಲ್ಲಿ ಈ ತಿದ್ದುಪಡಿ ವಿರುದ್ಧ ಬೀದಿಗಿಳಿಯಲಿದ್ದಾರೆ. ಕೃಷಿ ಕಾನೂನುಗಳನ್ನು ಹಿಂಪಡೆದಂತೆ ಉದ್ಯೋಗ ಖಾತ್ರಿ ತಿದ್ದುಪಡಿಯನ್ನು ವಾಪಾಸ್? ಪಡೆಯುವ ಪರಿಸ್ಥಿತಿ ಬರಲಿದೆ ಎಂದರು.
ಜಲಜೀವನ್ ಮಿಷನ್ ಯೋಜನೆಯ ಬಳಕೆ ಪ್ರಮಾಣ ಪತ್ರವನ್ನು ನಾವು ಸಲ್ಲಿಸಿದ್ದೇವೆ. ಆದರೂ ಕೇಂದ್ರದಿಂದ 12 ಸಾವಿರ ಕೋಟಿ ರೂ.ಗಳು ಬಾಕಿ ಉಳಿದಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇರಳದ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಮನೆಗಳನ್ನು ದ್ವಂಸಗೊಳಿಸಿರುವ ಬಗ್ಗೆ ಮಾತನಾಡುವ ಬದಲು ತಮದೇ ರಾಜ್ಯದಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಪ್ರತಿಕ್ರಿಯಿಸಲಿ ಎಂದು ತಿರುಗೇಟು ನೀಡಿದರು.
ಕೇಂದ್ರ ಸರ್ಕಾರ ಯಾವುದೇ ಕೆಲಸ ಮಾಡದೆ ಇದ್ದರೂ ಅಗ್ಗದ ಪ್ರಚಾರ ಪಡೆಯುತ್ತದೆ. ಕರ್ನಾಟಕಕ್ಕೆ ವಿಸ್ಟ್ರಾನ್ ಮತ್ತು ಫಾಸ್ಕಾನ್ ಉದ್ಯಮಗಳು ನಮ ಅವಧಿಯಲ್ಲಿ ಆರಂಭಗೊಂಡಿವೆ ಎಂದು ಪ್ರಿಯಾಂಕ ಖರ್ಗೆ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಟೀಕೆಗೆ ಪ್ರತ್ಯುತ್ತರಿಸಿದ್ದಾರೆ.

