HomeLive Newsಜುಲೈ 5 ರಿಂದ ಆರಂಭವಾಗಲಿದೆ ತಮಿಳುನಾಡು ಪ್ರೀಮಿಯರ್ ಲೀಗ್

ಜುಲೈ 5 ರಿಂದ ಆರಂಭವಾಗಲಿದೆ ತಮಿಳುನಾಡು ಪ್ರೀಮಿಯರ್ ಲೀಗ್

ತಮಿಳುನಾಡಿನ ಸಾಕಷ್ಟು ಆಟಗಾರರು ಈಗಾಗಲೇ ಐಪಿಎಲ್ ಸೇರಿದಂತೆ ಭಾರತ ತಂಡದಲ್ಲಿ ಅವಕಾಶ ಪಡೆದು ಮಿಂಚಿದ್ದಾರೆ. ಪ್ರತಿ ವರ್ಷವೂ ನಡೆಯುವ ತಮಿಳುನಾಡು ಪ್ರೀಮಿಯರ್ ಲೀಗ್ ದಿನದಿಂದ ದಿನಕ್ಕೆ ಬೆಳವಣಿಗೆ  ಕಾಣುತ್ತಿದ್ದು, ಭರ್ಜರಿ ಮನರಂಜನೆ ನೀಡುತ್ತಿದೆ.

ತಮಿಳುನಾಡು ಪ್ರೀಮಿಯರ್ ಲೀಗ್ ಇದೀಗ  ಜುಲೈ 5 ರಿಂದ ಆರಂಭವಾಗಲಿದ್ದು, ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಜುಲೈ 5ರಿಂದ 28ರ ವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಜುಲೈ 30 ರಂದು ಕ್ವಾಲಿಫಯರ್ ಪಂದ್ಯಗಳಿದ್ದರೆ,  ಆಗಸ್ಟ್ 4ರಂದು ಫೈನಲ್ ಪಂದ್ಯ ನಡೆಯಲಿದೆ. ಒಟ್ಟಾರೆ ಎಂಟು ತಂಡಗಳು ಟ್ರೋಫಿಗಾಗಿ  ಸೆಣಸಾಡಲಿವೆ. ಮೊದಲ ಪಂದ್ಯದಲ್ಲೇ ಲೈಕಾ ಕೋವೈ ಕಿಂಗ್ಸ್ ಮತ್ತು ಚೆಪಾಕ್ ಸೂಪರ್ ಗಿಲ್ಲಿಸ್ ಮುಖಾಮುಖಿಯಾಗಲಿವೆ.

For Latest News Updates, Join Our Whatsapp Community🚩
RELATED ARTICLES

Most Popular