HomeLatest NewsT20 World Cup 2026: ವೇಗದ ಟಿ20 ಅರ್ಧಶತಕ ಬಾರಿಸಿದ ಶನಕ; ಟೂರ್ನಿಯಲ್ಲಿ ಅತ್ಯಧಿಕ ರನ್...

T20 World Cup 2026: ವೇಗದ ಟಿ20 ಅರ್ಧಶತಕ ಬಾರಿಸಿದ ಶನಕ; ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಲಂಕಾ

ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಟೂರ್ನಿಯ ಗ್ರೂಪ್ ಹಂತದ 16ನೇ ಪಂದ್ಯ ನಡೆಯುತ್ತಿದ್ದು, ಶ್ರೀಲಂಕಾ ಹಾಗೂ ಒಮನ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಒಮನ್ ಶ್ರೀಲಂಕಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಶ್ರೀಲಂಕಾ ರನ್ ಮಳೆ ಸುರಿಸಿದ್ದು, 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿ ಒಮನ್‌ಗೆ 226 ರನ್‌ಗಳ ಗುರಿಯನ್ನು ನೀಡಿದೆ. ಇದು ಈ ಬಾರಿಯ ಟೂರ್ನಿಯಲ್ಲಿ ಇಲ್ಲಿಯವರೆಗೆ ದಾಖಲಾದ ಅತ್ಯಧಿಕ ತಂಡದ ಮೊತ್ತವಾಗಿದೆ.

ಶ್ರೀಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಪಥುಮ್ ನಿಸ್ಸಾಂಕ 13 ರನ್ ಹಾಗೂ ಕಮಿಲ್ ಮಿಶಾರಾ 8 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಕಣಕ್ಕಿಳಿದ ಕುಸಾಲ್ ಮೆಂಡಿಸ್ 45 ಎಸೆತಗಳಲ್ಲಿ 61 ರನ್ ಕಲೆಹಾಕಿದರೆ, ಪವನ್ ರತ್ಯಾಯಕೆ 28 ಎಸೆತಗಳಲ್ಲಿ 60 ರನ್ ಚಚ್ಚಿದರು. 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ದಸುನ್ ಶನಕ ಟಿ ಟ್ವೆಂಟಿಯಲ್ಲಿ ಶ್ರೀಲಂಕಾ ಪರ ವೇಗವಾಗಿ ಅರ್ಧಶತಕ ಬಾರಿಸಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆ ಮುರಿದರು. ಶನಕ 20 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಐದು ಸಿಕ್ಸರ್ ಸಹಿತ 50 ರನ್ ಬಾರಿಸಿದರು. ಕಮಿಂದು ಮೆಂಡಿಸ್ ಅಜೇಯ 19 ರನ್ ಹಾಗೂ ದುನಿತ್ ವೆಲ್ಲಲಾಗೆ ಅಜೇಯ 6 ರನ್ ಬಾರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಮನ್ ಪರ ಜಿತೆನ್ ರಮಮಂಡಿ ಎರಡು ವಿಕೆಟ್, ಸುಫ್ಯನ್ ಮೆಹ್ಮೊದ್ ಹಾಗೂ ಜಯ್ ಒದೆದ್ರಾ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular