HomeLatest Newsನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ ಸುಧಾರಾಣಿ ನೇಮಕ: ಬಮೂಲ್ ನಡೆಗೆ KMFನಿಂದ ತೀವ್ರ ಆಕ್ಷೇಪ

ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ ಸುಧಾರಾಣಿ ನೇಮಕ: ಬಮೂಲ್ ನಡೆಗೆ KMFನಿಂದ ತೀವ್ರ ಆಕ್ಷೇಪ

ಬೆಂಗಳೂರು: ಮೈಸೂರು ಸ್ಯಾಂಡಲ್ ಉತ್ಪನ್ನಗಳಿಗೆ ಖ್ಯಾತ ನಟಿ ತಮನ್ನಾ ಭಾಟಿಯಾರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿದ್ದಕ್ಕೆ ಕೆಲ ದಿನಗಳ ಹಿಂದೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡದ ನಟಿಯರನ್ನು ಬಿಟ್ಟು ಪರಭಾಷಾ ನಟಿಯರಿಗೆ ಸರ್ಕಾರ ಮಣೆ ಹಾಕುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಬೆಂಅಗ್ಳೂರು ಹಾಲೂ ಒಕ್ಕೂಟ-ಬಮೂಲ್ ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯನ್ನಾಗಿ ಕನ್ನಡದ ಖ್ಯಾತ ನಟಿ ಸುಧಾರಾಣಿ ಅವರನ್ನು ನೇಮಕ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ನಂದಿನಿ ಉತ್ಪನ್ನಗಳಿಗೆ ರಾಯಭಾರಿಯನ್ನಾಗಿ ಸುಧಾರಾಣಿ ಅವರನ್ನು ನೇಮಕ ಮಾಡುವ ಮೂಲಕ ಬಮೂಲ್ ಸ್ವತಂತ್ರ ನಿರ್ಧಾರ ಕೈಗೊಂಡಿದೆ. ಯಾವುದೇ ಮಾಹಿತಿ ನೀಡಿದೇ ಬಮೂಲ್ ಕೈಗೊಂಡೊರುವ ಈ ಕ್ರಮ ಸರಿಯಲ್ಲ ಎಂದು ಮಾತೃಸಂಸ್ಥೆಯಾದ ಕೆ.ಎಂ.ಎಫ್ ಆಕ್ಷೇಪ ವ್ಯಕ್ತಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಮೂಲ್ ಸಂಸ್ಥೆಯು ಬೈಲಾದ ವಿರುದ್ಧವಾಗಿ ರಾಯಭಾರಿ ಅನ್ನು ನೇಮಕ ಮಾಡಿದೆ. ಈ ನೇಮಕವು ನಿಯಮ ಬಾಹಿರವಾಗಿದೆ ಎಂದಿದೆ. ಕೆಎಂಎಫ್​​ಗೆ ಮಾಹಿತಿ ಸಹ ನೀಡದೆ ರಾಯಭಾರಿ ನೇಮಕ ಮಾಡಿರುವ ಬಗ್ಗೆ ಬಮೂಲ್ ಅಧಿಕಾರಿಗಳ ಬಳಿ ಸ್ಪಷ್ಟನೆ ಕೇಳಲಾಗುವುದು ಎಂದು ಕೆಎಂಎಫ್​​ನ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.

ನಂದಿನಿಯ ಉತ್ಪನ್ನಗಳಿಗೆ ಡಾ ರಾಜ್​​ಕುಮಾರ್ ಪ್ರಥಮ ರಾಯಭಾರಿ ಆಗಿದ್ದರು. ರಾಜ್​​ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ನೀಡಿದ ಪ್ರಚಾರದಿಂದಾಗಿ ನಂದಿನಿಯ ಉತ್ಪನ್ನಗಳು ರಾಜ್ಯದಾದ್ಯಂತ ಮನೆ ಮಾತಾದವು. ಬಳಿಕ ಪುನೀತ್ ರಾಜ್​​ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿ ಆದರು. ಪುನೀತ್ ಅವರೂ ಸಹ ಉಚಿತವಾಗಿ ನಂದಿನಿಗೆ ರಾಯಭಾರಿ ಆಗಿದ್ದರು. ಆದರೆ ಅವರ ನೇಮಕವನ್ನು ಕೆಎಂಎಫ್​ ಮಾಡಿತ್ತು, ಇದೀಗ ಬಮೂಲ್ ನಂದಿನಿ ಉತ್ಪನ್ನಗಳಿಗೆ ಸುಧಾರಾಣಿ ಅವರನ್ನು ಹೇಳದೇ ಕೇಳದೇ ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಎರಡು ದಿನಗಳ ಹಿಂದೆ ಬಮೂಲ್​​ನ ಅಧ್ಯಕ್ಷ ಡಿ.ಕೆ ಸುರೇಶ್ ಅವರು ಸುಧಾರಾಣಿ ಅವರನ್ನು ಭೇಟಿಯಾಗಿ ಅವರಿಗೆ ಹೂಗುಚ್ಛ ನೀಡಿ ಅವರನ್ನು ಬಮೂಲ್​​ ಉತ್ಪನ್ನಗಳ ರಾಯಭಾರಿ ಆಗಿ ಸ್ವಾಗತಿಸಿದ್ದಾರೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಹಿರಿಯ ನಟಿ ಸುಧಾರಾಣಿ, ತಲೆಮಾರುಗಳಿಂದ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಪ್ರತೀಕ ನಂದಿನಿ. ರೈತರ ಸಹಕಾರಿ ಸಂಸ್ಥೆಯಾದ ಬಮುಲ್ ನಂದಿನಿ ಜೊತೆ ಒಡಗೂಡುವ ಅವಕಾಶ ನನಗೆ ಅತ್ಯಂತ ಗೌರವದ ವಿಷಯ. ಡಾ. ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕೇವಲ ಅನುಕರಣೆಯಲ್ಲ ಧನ್ಯತೆ ಮತ್ತು ಹೆಮ್ಮೆಯ ಜವಾಬ್ದಾರಿ ಎಂದು ತಿಳಿಸಿದ್ದಾರೆ.

ಸಂಸ್ಥೆಯಿಂದ ಬರುವ ಹೊಸ ಉತ್ಪನ್ನಗಳ ಬಿಡುಗಡೆಯ ಹಿಂದೆ ಇರುವ ದೃಷ್ಟಿಕೋನ ನಿಜಕ್ಕೂ ಪ್ರೇರಣಾದಾಯಕವಾಗಿತ್ತು. ನಮ್ಮ ದೇಸಿ ಹಸುಗಳನ್ನು ಸಂರಕ್ಷಿಸುವುದು, ರೈತರಿಗೆ ನ್ಯಾಯಸಮ್ಮತ ಬೆಲೆ ಖಚಿತಪಡಿಸುವುದು ಹಾಗೂ ಗ್ರಾಹಕರಿಗೆ ಗುಣಮಟ್ಟದ, ವಿಶ್ವಾಸಾರ್ಹ ಉತ್ಪನ್ನಗಳನ್ನು ತಲುಪಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಈ ಹೊಸ ಅಧ್ಯಾಯದಲ್ಲಿ ದೇಸಿ ಹಸುಗಳಿಂದ ತಯಾರಿಸಿದ A2 ತುಪ್ಪ, A2 ಹಾಲು ಸೇರಿದಂತೆ ಹಲವು ಉತ್ಪನ್ನಗಳು ಸೇರಿದೆ.

ಸಂಪ್ರದಾಯ, ಶುದ್ಧತೆ ಮತ್ತು ರೈತರ ಕಲ್ಯಾಣದ ಮೌಲ್ಯಗಳು ಅಡಕವಾಗಿರುವ, ರೈತರನ್ನು ಮನ್ನೆಲೆಗೆ ತರುವ, ನಮ್ಮ ಬೇರುಗಳನ್ನು ಗೌರವಿಸುವ ಮತ್ತು ಕರ್ನಾಟಕದ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಸಾಗಿಸುವ ಈ ಚಳವಳಿಗೆ ಬೆಂಬಲ ನೀಡಲು ನನಗೆ ಅಪಾರ ಹೆಮ್ಮೆಯಾಗುತ್ತಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular