HomeLatest NewsT20 World Cup 2026: ಆ ಒಬ್ಬ ಆಡಿದ್ರೆ ಮಾತ್ರ ಭಾರತವನ್ನು ಸೋಲಿಸುವುದು ಕಷ್ಟ, ಇಲ್ಲದಿದ್ದರೆ...

T20 World Cup 2026: ಆ ಒಬ್ಬ ಆಡಿದ್ರೆ ಮಾತ್ರ ಭಾರತವನ್ನು ಸೋಲಿಸುವುದು ಕಷ್ಟ, ಇಲ್ಲದಿದ್ದರೆ ದುರ್ಬಲ ತಂಡ ಎಂದ ರಿಕಿ ಪಾಂಟಿಂಗ್

ಇಂದು ( ಫೆಬ್ರವರಿ 7 ) ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ 2026ರ ಟಿ ಟ್ವೆಂಟಿ ವಿಶ್ವಕಪ್ ಆರಂಭವಾಗಲಿದೆ.

ಒಟ್ಟು 20 ತಂಡಗಳು ಟ್ರೋಫಿಗಾಗಿ ಪೈಪೋಟಿ ನಡೆಸಲಿದ್ದು, ಮೊದಲ ದಿನವೇ ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಇದೇ ದಿನ ಭಾರತ ಮೂರನೇ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧ ಕಣಕ್ಕಿಳಿದು ತನ್ನ ಮೊದಲ ಪಂದ್ಯವನ್ನಾಡಲಿದೆ.

ಇನ್ನು 2024ರ ಟಿ ಟ್ವೆಂಟಿ ವಿಶ್ವಕಪ್ ಗೆದ್ದು ಹಾಲಿ ಚಾಂಪಿಯನ್ ಎನಿಸಿಕೊಂಡಿರುವ ಭಾರತ ಈ ಬಾರಿಯೂ ಸಹ ಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲೊಂದಾಗಿದೆ. ತನ್ನ ಬಲಿಷ್ಠ ಬ್ಯಾಟಿಂಗ್ ವಿಭಾಗದಿಂದ ಈಗಾಗಲೇ ಹಲವು ಬಾರಿ ದೊಡ್ಡ ಮೊತ್ತಗಳನ್ನು ಕಲೆಹಾಕಿರುವ ಭಾರತ ಸರಾಗವಾಗಿ 200 ರನ್ ಬಾರಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದರಲ್ಲೂ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿಯುವ ಆಟಗಾರ ಅಭಿಷೇಕ್ ಶರ್ಮಾ ಮೊದಲ ಎಸೆತದಿಂದಲೇ ಅಬ್ಬರದ ಬ್ಯಾಟಿಂಗ್ ನಡೆಸುವ ಕಾರಣ ತಂಡ ಬೃಹತ್ ಮೊತ್ತ ಗಳಿಸುವುದರ ಹಿಂದಿನ ಪ್ರಮುಖ ಕಾರಣರಾಗಿದ್ದಾರೆ. ಹೀಗಾಗಿ ಎಲ್ಲ ಚಿತ್ತ ಈ ಬಾರಿ ಅಭಿಷೇಕ್ ಶರ್ಮಾ ಬ್ಯಾಟಿಂಗ್‌ನತ್ತ ಇದೆ.

ಟೂರ್ನಿಯಲ್ಲಿ ಭಾರತ ಹೇಗೆ ಪ್ರದರ್ಶನ ನೀಡಲಿದೆ ಎನ್ನುವುದನ್ನು ಊಹಿಸುವುದರ ಕುರಿತ ಪ್ರಶ್ನೆಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಕ್ರಿಕೆಟ್ ಜಗತ್ತಿನ ಅತಿ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಉತ್ತರಿಸಿದ್ದಾರೆ.

‘ಅಭಿಷೇಕ್ ಶರ್ಮಾ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸುವ ಆಟಗಾರನಾಗಬಹುದು ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಆ ಕೆಲಸವನ್ನು ಆತ ಮಾಡಿದರೆ ಭಾರತ ಭಾರತವನ್ನು ಸೋಲಿಸುವುದು ಕಷ್ಟ. ಇಲ್ಲದಿದ್ದರೆ ಅವರೂ ಸಹ ಎಲ್ಲರಂತೆ ದುರ್ಬಲರು. ಇಷ್ಟರ ಮಟ್ಟಕ್ಕೆ ಈ ಟೂರ್ನಿಯಲ್ಲಿ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಮುಖ್ಯ’ ಎಂದು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ತಾವು ಕೋಚ್ ಆಗಿದ್ದಾಗ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಅಭಿಷೇಕ್ ಶರ್ಮಾ ಕುರಿತು ಸಹ ಪಾಂಟಿಂಗ್ ಮಾತನಾಡಿದರು. ‘ನಾನು ಆತನ ಮೊದಲ ಐಪಿಎಲ್ ಕೋಚ್. ಆತ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಡೆಲ್ಲಿ ತಂಡದ ಮೇಲೆ ಪ್ರಭಾವ ಬೀರಿದ್ದ. 17 ವರ್ಷದ ಆತ ಮೊದಲ ಎಸೆತವನ್ನೇ ಬೌಂಡರಿ ಹಾಗೂ ಸಿಕ್ಸ್ ಬಾರಿಸುತ್ತಿದ್ದ. ಆ ವಯಸ್ಸಿಗೆ ಅಂತಹ ಆಕ್ರಮಣಕಾರಿ ಆಟ ತುಂಬಾ ವಿಶೇಷ’ ಎಂದರು.

ಇನ್ನು ಅಭಿಷೇಕ್ ಶರ್ಮಾರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಟ್ರೇಡ್ ಮಾಡಿದ್ದನ್ನೂ ಸಹ ನೆನಪಿಸಿಕೊಂಡ ಪಾಂಟಿಂಗ್ ಆ ಸಮಯದಲ್ಲಿ ಈ ನಿರ್ಧಾರ ಬೇಡ ಎಂದು ಹಲವು ಬಾರಿ ಮನವಿ ಮಾಡಿಕೊಂಡಿದ್ದೆ ಎಂದು ಸಹ ತಿಳಿಸಿದರು. ಸೂಪರ್‌ಸ್ಟಾರ್ ತಯಾರಾಗುತ್ತಿದ್ದಾನೆ, ಆತ ತಂಡಕ್ಕೆ ಬೇಕು ಎಂದು ಹೇಳಿದ್ದೆ. ಆದರೆ ಟ್ರೇಡ್ ನಡೆದೇ ಹೋಯಿತು ಎಂದು ಪಾಂಟಿಂಗ್ ಕಳೆದ ದಿನಗಳನ್ನು ನೆನೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular