ಬೆಂಗಳೂರು: ನೂತನ ಸಚಿವರ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಆಗಸ್ಟ್ 3ರಂದು ಹಲವು ಸಂಚಾರ ಮಾರ್ಪಾಡುಗಳನ್ನು ಪ್ರಕಟಿಸಿದ್ದಾರೆ.
ಲೋಕಭವನದ ಗಾಜಿನ ಮನೆಯಲ್ಲಿ ಆಗಸ್ಟ್ 3ರಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ ಗಣ್ಯರು ಹಾಗೂ ಅತಿಗಣ್ಯ ವ್ಯಕ್ತಿಗಳು ಆಗಮಿಸುವ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಜಾರಿಗೊಳಿಸಲಾಗಿದೆ.
ಯಾವೆಲ್ಲಾ ರಸ್ತೆಗಳಲ್ಲಿ ನಿರ್ಬಂಧ?
• ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್ನಿಂದ ಸಿ.ಟಿ.ಓ ಜಂಕ್ಷನ್ವರೆಗೆ ವಾಹನ ಸಂಚಾರ ನಿರ್ಬಂಧ.
• ಸಿ.ಟಿ.ಓ ವೃತ್ತದಿಂದ ಲೋಕಭವನದವರೆಗೆ ವಾಹನಗಳಿಗೆ ನಿರ್ಬಂಧ.
• ಬಾಳೇಕುಂದ್ರಿ ಜಂಕ್ಷನ್ನಿಂದ ಅಂಬೇಡ್ಕರ್ ರಸ್ತೆಗೆ ಬರುವ ವಾಹನಗಳ ಸಂಚಾರಕ್ಕೆ ನಿರ್ಬಂಧ.
• ಕೆ.ಆರ್. ಸರ್ಕಲ್ನಿಂದ ಕಾಫೀಬೋರ್ಡ್ ಜಂಕ್ಷನ್ವರೆಗೆ ಸಂಚಾರ ನಿಯಂತ್ರಣ.
• ಕ್ವೀನ್ಸ್ ಜಂಕ್ಷನ್, ಸೆಂಟ್ ಮಾರ್ಕ್ಸ್ ರಸ್ತೆ ಭಾಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ.
ಪರ್ಯಾಯ ಮಾರ್ಗಗಳ ಮಾಹಿತಿ
• ಬಿ.ಆರ್.ವಿ ಜಂಕ್ಷನ್ ಬಳಿ ವಾಹನ ಸವಾರರು ಶಿವಾಜಿನಗರ ಕಡೆಗೆ ತಿರುಗಿ ಸಂಚರಿಸಬಹುದು.
• ಕ್ವೀನ್ಸ್ ರಸ್ತೆ ಹಾಗೂ ಶಿವಾಜಿನಗರ ಕಡೆಯಿಂದ ಬರುವವರು ಕನ್ನಿಂಗ್ಹ್ಯಾಮ್ ರಸ್ತೆ ಮೂಲಕ ತೆರಳಬಹುದು.
• ಕೆ.ಆರ್. ಸರ್ಕಲ್ ಕಡೆಯಿಂದ ಬರುವ ವಾಹನಗಳು ನೃಪತುಂಗ ರಸ್ತೆ ಮಾರ್ಗ ಬಳಸಬೇಕು.
• ಹಲಸೂರು, ಹಳೆ ಏರ್ಪೋರ್ಟ್ ರಸ್ತೆ ಕಡೆಯಿಂದ ಬರುವವರು ಶಿವಾಜಿನಗರ ಬಸ್ ನಿಲ್ದಾಣ–ಬಾಳೇಕುಂದ್ರಿ ಜಂಕ್ಷನ್–ಕನ್ನಿಂಗ್ಹ್ಯಾಮ್ ರಸ್ತೆ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.
ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ
• ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ
• ಕಬ್ಬನ್ ರಸ್ತೆ
• ಕ್ವೀನ್ಸ್ ರಸ್ತೆ
• ಲೋಕಭವನ ರಸ್ತೆ
• ನೃಪತುಂಗ ರಸ್ತೆ
• ಕಸ್ತೂರಿಬಾ ರಸ್ತೆ
• ಮಿಲ್ಲರ್ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ
ಪಾಸ್ ಹೊಂದಿರುವ ವಾಹನಗಳಿಗೆ:
• ವಿಧಾನಸೌಧ ಸಿಮೆಂಟ್ ಪಾರ್ಕಿಂಗ್
• ವಿಕಾಸಸೌಧ ಸುತ್ತಮುತ್ತ
• ರಾಜಭವನ ಹಿಂಭಾಗದ ಎಲ್.ಎಚ್. ಪಾರ್ಕಿಂಗ್
• ನೆಹರೂ ತಾರಾಲಯ ಆವರಣ
ಪಾಸ್ ಇಲ್ಲದ ವಾಹನಗಳಿಗೆ:
• ಕೊಂಡಜ್ಜಿ ಭವನ
• ಶಿವಾಜಿನಗರ ಮಲ್ಟಿಲೆವೆಲ್ ಪಾರ್ಕಿಂಗ್
• ಕಂಠೀರವ ಕ್ರೀಡಾಂಗಣ
• ಯುಬಿ ಸಿಟಿ ಪಾರ್ಕಿಂಗ್
• ಸರ್ಕಾರಿ ಕಲಾ ಕಾಲೇಜು ಆವರಣ
ಭಾರೀ ವಾಹನಗಳಿಗೆ ನಿರ್ಬಂಧ
ಆಗಸ್ಟ್ 3ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರಿಗೆ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಂಡು, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.

