HomeKarnatakaBREAKING: ವಿ.ಎಸ್. ಉಗ್ರಪ್ಪಗೆ ಭೋವಿ ಸಮಾಜದ ಮುಖಂಡರಿಂದ ಮುತ್ತಿಗೆ

BREAKING: ವಿ.ಎಸ್. ಉಗ್ರಪ್ಪಗೆ ಭೋವಿ ಸಮಾಜದ ಮುಖಂಡರಿಂದ ಮುತ್ತಿಗೆ

ಶಿವಮೊಗ್ಗ: ಒಳಮೀಸಲಾತಿ ಕುರಿತಂತೆ ವಾಲ್ಮೀಕಿ ಸಮಾಜದ ಮುಖಂಡರೊಂದಿಗೆ ಸುದ್ದಿಗೋಷ್ಟಿ ನಡೆಸಲು ಇಂದು ಶಿವಮೊಗ್ಗಕ್ಕೆ ಬಂದಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಅವರಿಗೆ ಭೋವಿ ಸಮಾಜದ ಮುಖಂಡರಿAದ ಪ್ರತಿಭಟನೆಯ ಬಿಸಿ ತಟ್ಟಿತು.

ಗುರುವಾರ ಬೆಳಗ್ಗೆ ಉಗ್ರಪ್ಪ ಅವರು ನಗರದ ಆರ್.ಟಿ.ಒ ರಸ್ತೆಯಲ್ಲಿನ ಪತ್ರಿಕಾಭವನದ ಎದುರು ಪತ್ರಿಕಾಗೋಷ್ಡಿ ನಡೆಸಿ ಹೊರ ಬಂದ ತಕ್ಷಣವೇ ಭೋವಿ ಸಮಾಜದ ಮುಖಂಡರು ಧಿಡೀರನೆ ಉಗ್ರಪ್ಪ ಅವರ ಕಾರಿಗೆ ಅಡ್ಡಗಟ್ಟಿ ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಕಾಏಕಿ ನಡೆದ ಈ ಘಟನೆಯಿಂದ ವಿಚಲಿತರಾದ ಉಗ್ರಪ್ಪ ಅವರು ಯಾಕಾಗಿ ತಮಗೆ ಘೇರಾವ್ ಹಾಕಲಾಗಿದೆ ಎನ್ನುವುದೇ ಅರ್ಥವಾಗದೆ ಕಾರಿನಲ್ಲಿಯೇ ಕುಳಿತಿದ್ದರು. ಈ ವೇಳೆ ವಾಲ್ಮೀಕಿ ಸಮಾಜದ ಮುಖಂಡರು ಕಾರಿನಿಂದ ಕೆಳಗಿಳಿದು ಬಂದು, ಭೋವಿ ಸಮಾಜದ ಮುಖಂಡರನ್ನು ಸಮಾಧಾನಿಸಲು ಯತ್ನಿಸಿದರು. ಆದರೂ ಭೋವಿ ಸಮಾಜದ ಮುಖಂಡರಾದ ವೀರಭದ್ರಪ್ಪ ಪೂಜಾರಿ, ಬೂದಿಗೆರೆ ಬಸವರಾಜ್, ಹೊಂಗಿರಣ ಲೋಕೇಶ್, ಚನ್ನಾ ಮುಂಬಾಪುರ ಮಂಜುನಾಥ್ ಅವರು, ಉಗ್ರಪ್ಪ ಅವರ ವಿರುದ್ಧ ಧಿಕ್ಕಾರ ಕೂಗುತ್ತಾ ಕಾರು ಸುತ್ತುವರೆದರು.

ತಕ್ಷಣವೇ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಆದರೂ ಭೋವಿ ಸಮಾಜದ ಮುಖಂಡರು, ಉಗ್ರಪ್ಪ ಅವರಿಗೆ ಭೋವಿ ಸಮಾಜದ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ, ಎಂದು ಕಾರು ಅಡ್ಡಗಟ್ಡಿ ಧಿಕ್ಕಾರ ಕೂಗುತ್ತಾ ಕಾರು ಗುದ್ದಿದರು. ಈ ಹಂತದಲ್ಲಿ ಗೊಂದಲ ಉಂಟಾಗಿ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು.

ಪೊಲೀಸರು ಮಧ್ಯಪ್ರವೇಶಿಸಿದ್ದು, ಉಗ್ರಪ್ಪ ಅವರನ್ನು ಅಲ್ಲಿಂದ ಕಳುಹಿಸಲಾಯಿತು. ಆ ನಂತರ ಭೋವಿ ಸಮಾಜದ ಮುಖಂಡ ವೀರಭದ್ರಪ್ಪ ಪೂಜಾರಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ವಡ್ಡರು ಭೋವಿಗಳಲ್ಲ, ನಿಜವಾದ ನಾಮಧಾರಿ ಭೋಯಿಗಳು. ಅವರನ್ನು ಈ ವಡ್ಡರು ಅವರನ್ಙು ಮೂಲೆಗುಂಪು ಮಾಡಿ ಮೀಸಲಾತಿ ಪಡೆಯುತ್ತಿದ್ದಾರೆಂದು ಉಗ್ರಪ್ಪ ಹೇಳಿಕೆ ನೀಡಿದ್ದಾರೆ. ಇದರ ಹಿಂದೆ ನಿಜವಾದ ಭೋವಿಗಳಾದ ನಮ್ಮನ್ನು ಮೀಸಲಾತಿಯಿಂದ ವಂಚಿಸುವ ಹುನ್ನಾರವಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

“:ಮೈಸೂರು ರಾಜರ ಕಾಲದಲ್ಲಿಯೇ ವಡ್ಡರು ಭೋವಿಗಳು, ಅವರು ಮೀಸಲಾತಿಗೆ ಅರ್ಹರು ಎಂದು ಹೇಳಲಾಗಿದೆ. ಜತೆಗೆ ಮೀಸಲಾತಿಗೆ ವಡ್ಡರನ್ನು ಕೂಡ ಸೇರಿಸಲಾಗಿದೆ. ಇಷ್ಟಾಗಿಯೂ ಕೂಡ ಉಗ್ರಪ್ಪ ಅವರು ಗೊಂದಲಾತ್ಮಕ ಹೇಳಿಕೆ ನೀಡಿ ಭೋವಿ ಸಮಾಜಕ್ಕೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ದೂರಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular