HomeLatest Newsಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಇಷ್ಟವಾಗುತ್ತೆ ಈ ಕ್ರಿಸ್ಪಿ ಸ್ಟ್ರಾಬೆರಿ ಪ್ಯಾನ್ ಕೇಕ್

ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಇಷ್ಟವಾಗುತ್ತೆ ಈ ಕ್ರಿಸ್ಪಿ ಸ್ಟ್ರಾಬೆರಿ ಪ್ಯಾನ್ ಕೇಕ್

ಮುಂಜಾನೆಯ ಉಪಾಹಾರಕ್ಕೆ ಏನಾದರೂ ವಿಭಿನ್ನ ಹಾಗೂ ರುಚಿಕರ ತಿನಿಸು ಸವಿಯಬೇಕು ಎನಿಸಿದರೆ ಸ್ಟ್ರಾಬೆರಿ ಪ್ಯಾನ್ ಕೇಕ್ ಅತ್ಯುತ್ತಮ ಆಯ್ಕೆ. ಹಣ್ಣಿನ ಸಿಹಿ ಮತ್ತು ಮೆದುವಾದ ಪ್ಯಾನ್ ಕೇಕ್ ಮಿಶ್ರಣವು ಬೆಳಗಿನ ಉಪಾಹಾರದ ಮೆರುಗನ್ನು ಹೆಚ್ಚಿಸುತ್ತದೆ. ಮನೆಯಲ್ಲಿಯೇ ಅತ್ಯಂತ ಸುಲಭವಾಗಿ ಇದನ್ನು ಹೇಗೆ ಸಿದ್ಧಪಡಿಸಬಹುದು ಎಂಬುದರ ವಿವರ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

  • ಮೈದಾ ಹಿಟ್ಟು – 200 ಗ್ರಾಂ

    📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
    APP ತೆರೆಯಿರಿ
  • ಸಕ್ಕರೆ – 2 ಟೇಬಲ್ ಸ್ಪೂನ್

  • ಬೇಕಿಂಗ್ ಪೌಡರ್ – 2 ಟೀ ಸ್ಪೂನ್

  • ಉಪ್ಪು – ಅರ್ಧ ಟೀ ಸ್ಪೂನ್

  • ಮೊಟ್ಟೆ – 2

  • ಹಾಲು – 250 ಮಿಲಿ

  • ಬೆಣ್ಣೆ (ಕರಗಿಸಿದ್ದು) – 50 ಗ್ರಾಂ

  • ವೆನಿಲ್ಲಾ ಎಸೆನ್ಸ್ – 1 ಟೀ ಸ್ಪೂನ್

  • ಸಣ್ಣಗೆ ಹೆಚ್ಚಿದ ಸ್ಟ್ರಾಬೆರಿ – 150 ಗ್ರಾಂ

ಮೇಲೆ ಅಲಂಕರಿಸಲು

  • ಸ್ಲೈಸ್ ಮಾಡಿದ ಸ್ಟ್ರಾಬೆರಿ – 200 ಗ್ರಾಂ

  • ಸಕ್ಕರೆ – 2 ಟೇಬಲ್ ಸ್ಪೂನ್

  • ನಿಂಬೆ ರಸ – 1 ಟೇಬಲ್ ಸ್ಪೂನ್

  • ವಿಸ್ಪ್ಡ್ ಕ್ರೀಮ್ ಮತ್ತು ಜೇನುತುಪ್ಪ ಅಥವಾ ಮೇಪಲ್ ಸಿರಪ್

ತಯಾರಿಸುವ ಹಂತಗಳು

ಮೊದಲು ಒಂದು ಸಣ್ಣ ಪಾತ್ರೆಯಲ್ಲಿ ಕತ್ತರಿಸಿದ ಸ್ಟ್ರಾಬೆರಿ ಚೂರುಗಳು, ಸಕ್ಕರೆ ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಬೆರೆಸಿ 15 ನಿಮಿಷಗಳ ಕಾಲ ಬದಿಗಿಡಿ. ಇದರಿಂದ ಸ್ಟ್ರಾಬೆರಿ ಹಣ್ಣು ತನ್ನ ರಸವನ್ನು ಬಿಟ್ಟು ಸಿರಪ್ ರೂಪಕ್ಕೆ ತಿರುಗುತ್ತದೆ.

ಬಳಿಕ ಒಂದು ದೊಡ್ಡ ಪಾತ್ರೆಯಲ್ಲಿ ಮೈದಾ ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್ ಮತ್ತು ಉಪ್ಪನ್ನು ಹಾಕಿ ಬೆರೆಸಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಮೊಟ್ಟೆ, ಹಾಲು, ಕರಗಿಸಿದ ಬೆಣ್ಣೆ ಹಾಗೂ ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಕಲಸಿ. ಈಗ ಒಣ ಸಾಮಗ್ರಿಗಳ ಮಿಶ್ರಣಕ್ಕೆ ಈ ದ್ರವ ಮಿಶ್ರಣವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ನಿಧಾನವಾಗಿ ಕಲಸಿಕೊಳ್ಳಿ. ಹಿಟ್ಟು ಹೆಚ್ಚು ಗಟ್ಟಿಯಾಗದಂತೆ ನೋಡಿಕೊಳ್ಳಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಸ್ಟ್ರಾಬೆರಿ ಚೂರುಗಳನ್ನು ಈ ಹಿಟ್ಟಿಗೆ ಸೇರಿಸಿ ಹಗುರವಾಗಿ ಬೆರೆಸಿ.

ಈಗ ಹಂಚನ್ನು ಮಧ್ಯಮ ಉರಿಯಲ್ಲಿ ಕಾಯಿಸಿ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಸವರಿ. ತಯಾರಿಸಿದ ಹಿಟ್ಟಿನಿಂದ ಸಣ್ಣ ಪ್ರಮಾಣವನ್ನು ಹಂಚಿನ ಮೇಲೆ ಹಾಕಿ. 2 ರಿಂದ 3 ನಿಮಿಷ ಬೇಯಿಸಿದಾಗ ಮೇಲ್ಭಾಗದಲ್ಲಿ ಗುಳ್ಳೆಗಳು ಏಳಲು ಪ್ರಾರಂಭವಾಗುತ್ತವೆ. ಆ ಸಮಯದಲ್ಲಿ ಅದನ್ನು ತಿರುಗಿಸಿ ಹಾಕಿ ಇನ್ನೊಂದು ಬದಿ ಹೊಂಬಣ್ಣ ಬರುವವರೆಗೆ ಬೇಯಿಸಿ.

ಬಿಸಿಯಾದ ಪ್ಯಾನ್ ಕೇಕ್ ಗಳನ್ನು ತಟ್ಟೆಯಲ್ಲಿಟ್ಟು, ಮೊದಲು ತಯಾರಿಸಿಟ್ಟುಕೊಂಡ ಸ್ಟ್ರಾಬೆರಿ ಸಿರಪ್, ಕ್ರೀಮ್ ಹಾಗೂ ಜೇನುತುಪ್ಪದೊಂದಿಗೆ ಅಲಂಕರಿಸಿ ಸವಿಯಲು ನೀಡಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular