alex Certify ಒಲಿಂಪಿಕ್​ ಕ್ರೀಡಾಕೂಟದಲ್ಲಿ ಟಿ10 ಕ್ರಿಕೆಟ್​ ನೋಡಬಯಸುತ್ತೇನೆಂದ ಕ್ರಿಸ್​ ಗೇಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಿಂಪಿಕ್​ ಕ್ರೀಡಾಕೂಟದಲ್ಲಿ ಟಿ10 ಕ್ರಿಕೆಟ್​ ನೋಡಬಯಸುತ್ತೇನೆಂದ ಕ್ರಿಸ್​ ಗೇಲ್​

ವೆಸ್ಟ್​ ಇಂಡೀಸ್​ ಕ್ರಿಕೆಟ್​ ತಂಡದ ಹಿರಿಯ ಆಟಗಾರ ಕ್ರಿಸ್​ ಗೇಲ್​ ಒಲಿಂಪಿಕ್​​ ಕ್ರೀಡಾಕೂಟದಲ್ಲಿ ಟಿ 10 ಮಾದರಿಯ ಕ್ರಿಕೆಟ್​ನ್ನು ನೋಡ ಬಯಸುತ್ತೇನೆ ಎಂದು ಹೇಳಿದ್ದಾರೆ.

ನಾನು ಒಲಿಂಪಿಕ್​​ನಲ್ಲಿ ಟಿ 10 ಪಂದ್ಯವನ್ನ ನೋಡಲು ಇಚ್ಚಿಸುತ್ತೇನೆ. ಇದೊಂದು ದೊಡ್ಡ ವೇದಿಕೆಯಾಗಿರೋದ್ರಿಂದ ಟಿ 10 ಕ್ರಿಕೆಟ್​ ಆಯೋಜಿಸಬೇಕೆಂದು ನಾನು ಭಾವಿಸುತ್ತೇನೆ. ಅಲ್ಲದೇ ಅಮೆರಿಕ ಕ್ರಿಕೆಟ್​ನ್ನೂ ಸೇರಿಸಿಕೊಳ್ಳೋದ್ರಿಂದ ಆದಾಯವೂ ಹೆಚ್ಚಲಿದೆ. ಜೊತೆಗೆ ಅನೇಕ ಯುವ ಆಟಗಾರರಿಗೆ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನವರಿ 28ರಿಂದ ಫೆಬ್ರವರಿ 6ರವರೆಗೆ ನಡೆಯಲಿರುವ ಅಬುಧಾಬಿ ಟಿ10 ಲೀಗ್​​ನ ಮುಂದಿನ ಆವೃತ್ತಿಯಲ್ಲಿ ಗೇಲ್​ ಅಬುಧಾಬಿ ಪರ ಆಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...