ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಹಿರಿಯ ಆಟಗಾರ ಕ್ರಿಸ್ ಗೇಲ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಟಿ 10 ಮಾದರಿಯ ಕ್ರಿಕೆಟ್ನ್ನು ನೋಡ ಬಯಸುತ್ತೇನೆ ಎಂದು ಹೇಳಿದ್ದಾರೆ.
ನಾನು ಒಲಿಂಪಿಕ್ನಲ್ಲಿ ಟಿ 10 ಪಂದ್ಯವನ್ನ ನೋಡಲು ಇಚ್ಚಿಸುತ್ತೇನೆ. ಇದೊಂದು ದೊಡ್ಡ ವೇದಿಕೆಯಾಗಿರೋದ್ರಿಂದ ಟಿ 10 ಕ್ರಿಕೆಟ್ ಆಯೋಜಿಸಬೇಕೆಂದು ನಾನು ಭಾವಿಸುತ್ತೇನೆ. ಅಲ್ಲದೇ ಅಮೆರಿಕ ಕ್ರಿಕೆಟ್ನ್ನೂ ಸೇರಿಸಿಕೊಳ್ಳೋದ್ರಿಂದ ಆದಾಯವೂ ಹೆಚ್ಚಲಿದೆ. ಜೊತೆಗೆ ಅನೇಕ ಯುವ ಆಟಗಾರರಿಗೆ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜನವರಿ 28ರಿಂದ ಫೆಬ್ರವರಿ 6ರವರೆಗೆ ನಡೆಯಲಿರುವ ಅಬುಧಾಬಿ ಟಿ10 ಲೀಗ್ನ ಮುಂದಿನ ಆವೃತ್ತಿಯಲ್ಲಿ ಗೇಲ್ ಅಬುಧಾಬಿ ಪರ ಆಡಲಿದ್ದಾರೆ.