ವಿಶಿಷ್ಟ ದಾಖಲೆಯೊಂದನ್ನು ಸೃಷ್ಟಿಸಿದ ಮುಂಬೈನ 44 ವರ್ಷದ ಮಹಿಳೆಯೊಬ್ಬರು, 24 ಗಂಟೆಗಳ ಸ್ಟೇಡಿಯಂ ರೇಸ್‌ನಲ್ಲಿದ್ದ 23 ಸಹಸ್ಪರ್ಧಿಗಳನ್ನು ಮಣಿಸಿದ್ದಾರೆ.
44 ವರ್ಷದ ಪ್ರೀತಿ ಲತಾ ಎಂಬ ಯೋಗ ಶಿಕ್ಷಕಿ ಏಜೀಸ್ ಇನ್ಶುರೆನ್ಸ್ ಆಯೋಜಿಸಿದ್ದ 24 ಗಂಟೆಗಳ ಸ್ಟೇಡಿಯಂ ರನ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಾರೆ 193.60 ಕಿಮೀ ಓಡಿದ ಪ್ರೀತಿ ವಿಜೇತೆಯಾದರೆ, ಎರಡನೇ ಸ್ಥಾನ ಪಡೆದ ಪರ್ವೀಂದರ್ ಸಿಂಗ್ 154 ಕಿಮೀ ಓಡಿದ್ದಾರೆ.
ಈ ಹಿಂದೆಯೂ ಸಹ 24-ಗಂಟೆ ರನ್ನಿಂಗ್ ಸ್ಫರ್ಧೆಯಲ್ಲಿ ಭಾಗವಹಿಸಿದ್ದರೂ ಸಹ ತಾವು ಎಂದೂ 100 ಕಿಮೀಗಿಂತ ಹೆಚ್ಚು ದೂರ ಓಡಿರಲಿಲ್ಲ ಎಂದು ಪ್ರೀತಿ ತಿಳಿಸಿದ್ದಾರೆ. ಓಟದ ಮೊದಲ 12 ಗಂಟೆಗಳ ಅವಧಿಯಲ್ಲಿ 100 ಕಿಮೀ ಓಡಿ ಮುಗಿಸಿದ್ದ ಪ್ರೀತಿಗೆ ಬೆಳಗ್ಗಿನ ಜಾವ 1ರಿಂದ 4 ಗಂಟೆಯವರೆಗೂ ವಿಶ್ರಾಂತಿ ಪಡೆಯಲು ಹೆಚ್ಚು ಚಿಂತಿಸಬೇಕಾಗಿ ಬರಲಿಲ್ಲವಂತೆ.
ತಂದೆ ಪರ ಪ್ರಚಾರ ಮಾಡಿದ ಪುಟ್ಟ ಬಾಲಕನ ವಿಡಿಯೋ ವೈರಲ್
ಮೊದಲ ಮಗುವಾದ ಬಳಿಕ ತಮ್ಮ ಆರೋಗ್ಯದತ್ತ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದ ಪ್ರೀತಿ, ಆರು ವರ್ಷಗಳ ಹಿಂದೆ ಮೊದಲ ಬಾರಿಗೆ 10 ಕಿಮೀ ರನ್ನಿಂಗ್ ಮಾಡಿದ್ದರು. ಅಲ್ಲಿಂದ ಆಚೆಗೆ ಬಹಳಷ್ಟು ಬಾರಿ 12-ಗಂಟೆ ಹಾಗೂ 24-ಗಂಟೆಗಳ ರನ್ನಿಂಗ್ ಮಾಡಿದ್ದಾರೆ ಪ್ರೀತಿ.
400 ಮೀ ಅಥ್ಲೆಟಿಕ್ ಟ್ರ‍್ಯಾಕ್‌ನಲ್ಲಿ ಈ ಓಟದ ಸ್ಫರ್ಧೆ ಆಯೋಜಿಸಲಾಗಿದ್ದು, ಓಟದ ನಡುವೆ ಬ್ರೇಕ್ ಪಡೆಯಲೆಂದು ಅಲ್ಲಲ್ಲಿ ಟೆಂಟ್‌ಗಳನ್ನು ನಿರ್ಮಿಸಲಾಗಿತ್ತು.