ಟೀಂ ಇಂಡಿಯಾ ತಂಡದ ಆಟಗಾರರನ್ನ ಭೇಟಿಯಾಗಿ ಮಾತನಾಡಿ ಎಂಬ ಶೀರ್ಷಿಕೆಯನ್ನ ಹೊಂದಿದ್ದ ಟಿಕೆಟ್ಗಳು ಇಂಡಿಯಾ – ಆಸ್ಟ್ರೇಲಿಯಾ ಏಕದಿನ ಹಾಗೂ ಟಿ 20 ಸಿರೀಸ್ ವೇಳೆ ಸ್ಟೇಡಿಯಂ ತುಂಬೆಲ್ಲ ಕಂಡು ಬಂದಿದ್ದವು.
ಬರೋಬ್ಬರಿ 31,083 ರೂಪಾಯಿಗೆ ಅತ್ಯುತ್ತಮ ಆಹಾರ, ಬಿಯರ್, ವೈನ್, ಜ್ಯೂಸ್ ಜೊತೆಗೆ ಟೀಂ ಇಂಡಿಯಾ ಆಟಗಾರರ ಜೊತೆ ಪ್ರಶ್ನೋತ್ತರ ಅವಧಿ ನಡೆಸುವ ಅವಕಾಶವಿರುತ್ತೆ ಎಂದು ಹೇಳಲಾಗಿತ್ತು. ಈ ಇವೆಂಟ್ ಜನವರಿ 5ರಂದು ಸಿಡ್ನಿಯ ಮಂಜಿತ್ಸ್ ವಾರ್ಫ್ ರೆಸ್ಟಾರೆಂಟ್ನಲ್ಲಿ ಆಯೋಜಿಸಲಾಗಿದೆ ಎಂದು ಇದರಲ್ಲಿ ತಿಳಿಸಲಾಗಿತ್ತು.
ಟಿಕೆಟ್ನ್ನ ಖರೀದಿ ಮಾಡಿದ್ದ 200 ಮಂದಿ ಟೀಂ ಇಂಡಿಯಾ ಆಟಗಾರರನ್ನ ಭೇಟಿಯಾಗುವ ಕನಸನ್ನ ಕಾಣುತ್ತಿದ್ದರು. ಆದರೆ ಇದು ಸುಳ್ಳು ವಿಚಾರ ಎಂದು ಹೇಳೋ ಮೂಲಕ ಸ್ಥಳೀಯ ಪೊಲೀಸರು ಟಿಕೆಟ್ ಖರೀದಿದಾರರಿಗೆ ಶಾಕಿಂಗ್ ಮಾಹಿತಿಯನ್ನ ನೀಡಿದ್ದಾರೆ.
ಮಂಜಿತ್ಸ್ ವಾರ್ಫ್ನ ಜನರಲ್ ಮ್ಯಾನೇಜರ್ ದೀಪ್ ಗುರ್ಜಲ್ ರನ್ನ ಬಂಧಿಸಲಾಗಿತ್ತು.
ಆದರೆ ಈಗ ಪ್ರಕರಣದ ಹಿಂದಿನ ಪ್ರಮುಖ ರೂವಾರಿ ಸಿಕ್ಕಿಬಿದ್ದಿದ್ದು ರೆಸ್ಟಾರೆಂಟ್ ಗೂ ಹಾಗೂ ಈ ವಂಚನೆಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀಸರು ಈಗ ವಂಚನೆ ಮಾಡಿದವರಿಂದ ಸಂತ್ರಸ್ತರಿಗೆ ಹಣ ವಾಪಸ್ ಕೊಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.