alex Certify ಕ್ವಾರಂಟೈನ್​ ಜೀವನದ ಅನುಭವ ಹಂಚಿಕೊಂಡ ರಿಷಬ್​ ಪಂತ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ವಾರಂಟೈನ್​ ಜೀವನದ ಅನುಭವ ಹಂಚಿಕೊಂಡ ರಿಷಬ್​ ಪಂತ್​..!

ಕೊರೊನಾ ಕಾರಣದಿಂದಾಗಿ ಈ ಬಾರಿಯ ಐಪಿಎಲ್​ ಪಂದ್ಯ ರದ್ದಾಗಿದೆ. ಹೀಗಾಗಿ ಸದ್ಯ ಮನೆಯಲ್ಲೇ ಇರುವ ಕ್ರಿಕೆಟ್​ ಆಟಗಾರರು ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದಿನವನ್ನ ಕಳೆಯುತ್ತಿದ್ದಾರೆ. ಇದೀಗ ಈ ಸಾಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್​ ಪಂತ್​ ಸಹ ಸೇರಿದ್ದಾರೆ. ಟ್ವಿಟರ್​​ನಲ್ಲಿ ಈ ಸಂಬಂಧ ವಿಡಿಯೋವೊಂದನ್ನ ಶೇರ್​ ಮಾಡಿರುವ ಪಂತ್​ ಸದಾ ಆಕ್ಟಿವ್​ ಆಗಿರಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ಹುಲ್ಲು ಹಾಸಿನಲ್ಲಿರುವ ಹುಲ್ಲನ್ನ ಮಿಷನ್​ನ ಸಹಾಯದಿಂದ ಕೀಳುತ್ತಿರುವ ವಿಡಿಯೋ ಶೇರ್​ ಮಾಡಿರುವ ಪಂತ್​, ಮನೆಯಲ್ಲೇ ಇದ್ದು ಸಕ್ರಿಯನಾಗಿರಲು ಖುಷಿ ಎನಿಸುತ್ತೆ. ದಯವಿಟ್ಟು ಎಲ್ಲರೂ ಸೇಫ್​ ಆಗಿರಿ ಎಂದು ಶೀರ್ಷಿಕೆ ನೀಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ದೇಶದ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವ ಮೂಲಕ ಪಂತ್​​ ಅಭಿಮಾನಿಗಳ ಮನಗೆದ್ದಿದ್ದರು. ಕೊರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವು ನೀಡಿರುವ ಪಂತ್​ ಈ ಹಣದಿಂದ ಆಕ್ಸಿಜನ್​ ಸಿಲಿಂಡರ್​, ಕೋವಿಡ್​ ರಿಲೀಫ್​ ಕಿಟ್​ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳನ್ನ ದೇಶಕ್ಕೆ ಕೊಡುಗೆ ರೂಪದಲ್ಲಿ ನೀಡೋದಾಗಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು.

— Rishabh Pant (@RishabhPant17) May 11, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...