ಕ್ವಾರಂಟೈನ್ ಜೀವನದ ಅನುಭವ ಹಂಚಿಕೊಂಡ ರಿಷಬ್ ಪಂತ್..! 12-05-2021 11:09AM IST / No Comments / Posted In: Corona, Corona Virus News, Latest News, Sports ಕೊರೊನಾ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಪಂದ್ಯ ರದ್ದಾಗಿದೆ. ಹೀಗಾಗಿ ಸದ್ಯ ಮನೆಯಲ್ಲೇ ಇರುವ ಕ್ರಿಕೆಟ್ ಆಟಗಾರರು ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದಿನವನ್ನ ಕಳೆಯುತ್ತಿದ್ದಾರೆ. ಇದೀಗ ಈ ಸಾಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಸಹ ಸೇರಿದ್ದಾರೆ. ಟ್ವಿಟರ್ನಲ್ಲಿ ಈ ಸಂಬಂಧ ವಿಡಿಯೋವೊಂದನ್ನ ಶೇರ್ ಮಾಡಿರುವ ಪಂತ್ ಸದಾ ಆಕ್ಟಿವ್ ಆಗಿರಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ಹುಲ್ಲು ಹಾಸಿನಲ್ಲಿರುವ ಹುಲ್ಲನ್ನ ಮಿಷನ್ನ ಸಹಾಯದಿಂದ ಕೀಳುತ್ತಿರುವ ವಿಡಿಯೋ ಶೇರ್ ಮಾಡಿರುವ ಪಂತ್, ಮನೆಯಲ್ಲೇ ಇದ್ದು ಸಕ್ರಿಯನಾಗಿರಲು ಖುಷಿ ಎನಿಸುತ್ತೆ. ದಯವಿಟ್ಟು ಎಲ್ಲರೂ ಸೇಫ್ ಆಗಿರಿ ಎಂದು ಶೀರ್ಷಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ದೇಶದ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವ ಮೂಲಕ ಪಂತ್ ಅಭಿಮಾನಿಗಳ ಮನಗೆದ್ದಿದ್ದರು. ಕೊರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವು ನೀಡಿರುವ ಪಂತ್ ಈ ಹಣದಿಂದ ಆಕ್ಸಿಜನ್ ಸಿಲಿಂಡರ್, ಕೋವಿಡ್ ರಿಲೀಫ್ ಕಿಟ್ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳನ್ನ ದೇಶಕ್ಕೆ ಕೊಡುಗೆ ರೂಪದಲ್ಲಿ ನೀಡೋದಾಗಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದರು. Ye Dil Mange "Mower"!Forced quarantine break but happy to be able to stay active while indoors. Please stay safe everyone.#RP17 pic.twitter.com/6DXmI2N1GY — Rishabh Pant (@RishabhPant17) May 11, 2021