alex Certify ಈ ಸೀಸನ್​ನ ಮೊದಲ ಅರ್ಧ ಶತಕವನ್ನ ಪುತ್ರಿಗೆ ಅರ್ಪಿಸಿದ ವಿರಾಟ್ ಕೊಹ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸೀಸನ್​ನ ಮೊದಲ ಅರ್ಧ ಶತಕವನ್ನ ಪುತ್ರಿಗೆ ಅರ್ಪಿಸಿದ ವಿರಾಟ್ ಕೊಹ್ಲಿ

ಈ ವರ್ಷದ ಐಪಿಎಲ್​ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಗೆಲುವಿನ ನಾಗಾಲೋಟವನ್ನ ಮುಂದುವರಿಸಿದೆ. ನಿನ್ನೆ ರಾಜಸ್ಥಾನ ರಾಯಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ 10 ವಿಕೆಟ್​ಗಳ ಗೆಲುವು ದಾಖಲಿಸುವ ಮೂಲಕ ಆರ್​ಸಿಬಿ ತನ್ನ ಅಭಿಮಾನಿಗಳಿಗೆ ಬಾಡೂಟವನ್ನೇ ಬಡಿಸಿದೆ.

ವಾಖೆಂಡೆ ಕ್ರೀಡಾಂಗಣದಲ್ಲಿ ಈ ಸೀಸನ್​ನ ಮೊದಲ ಪಂದ್ಯವನ್ನಾಡಿದ ಆರ್​ಸಿಬಿ, ರಾಜಸ್ಥಾನ ರಾಯನ್ಸ್ ನೀಡಿದ 178 ರನ್​ಗಳ ಗುರಿಯನ್ನ ಸುಲಭವಾಗಿ ಬೆನ್ನಟ್ಟುವಲ್ಲಿ ಯಶಸ್ವಿಯಾಯ್ತು. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ದೇವದತ್​ ಪಡಿಕಲ್​ ತಮ್ಮ ಮೊದಲ ಐಪಿಎಲ್​ ಶತಕವನ್ನ ಸಿಡಿಸಿದ್ರೆ ನಾಯಕ ವಿರಾಟ್​ ಕೊಹ್ಲಿ ಐಪಿಎಲ್​ ಸೀಸನ್​ನಲ್ಲೇ 6000 ರನ್ ​ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದ್ರು.

ಇನ್ನು ಪಂದ್ಯದಲ್ಲಿ 34 ಬಾಲ್ ಗಳಿಗೆ ಅರ್ಧ ಶತಕವನ್ನ ಸಿಡಿಸಿದ್ದ ವಿರಾಟ್​ ಕೊಹ್ಲಿ ಈ ಸೀಸನ್​ನ ಮೊದಲ ಅರ್ಧ‌ ಶತಕವನ್ನ ಮುದ್ದಿನ ಮಗಳು ವಮಿಕಾಗೆ ಅರ್ಪಿಸಿದ್ದಾರೆ.

ಆರ್​ಸಿಬಿ ಆಡಳಿತ ವರ್ಗ ಆಟಗಾರರ ಕುಟುಂಬಸ್ಥರಿಗೆ ಆಟಗಾರರ ಜೊತೆ ಇರಲು ಅವಕಾಶ ನೀಡಿದೆ. ಹೀಗಾಗಿ ಕೊಹ್ಲಿ ಪತ್ನಿ ಹಾಗೂ ಪುತ್ರಿ ಕೂಡ ಐಪಿಎಲ್​ ಪ್ರವಾಸದಲ್ಲಿದ್ದಾರೆ. ಅನುಷ್ಕಾ 2020ರಲ್ಲೂ ಕೊಹ್ಲಿ ಜೊತೆ ಯುಎಇಗೆ ಪ್ರಯಾಣ ಬೆಳೆಸಿದ್ದರು.

ಈ ವರ್ಷದ ಜನವರಿಯಲ್ಲಿ ಕೊಹ್ಲಿ – ಅನುಷ್ಕಾ ದಂಪತಿ ಹೆಣ್ಣು ಮಗುವನ್ನ ಬರಮಾಡಿಕೊಂಡಿದ್ದರು. ಇದೀಗ ಐಪಿಎಲ್​ ಸೀಸನ್​ನಲ್ಲಿ ಮಿಂಚುತ್ತಿರುವ ಕೊಹ್ಲಿ ಮಗಳಿಗೆ ತಮ್ಮ ಸಾಧನೆಯನ್ನ ಅರ್ಪಿಸಿದ್ದು, ಈ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

View this post on Instagram

A post shared by IPL (@iplt20)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...