
ವಾಖೆಂಡೆ ಕ್ರೀಡಾಂಗಣದಲ್ಲಿ ಈ ಸೀಸನ್ನ ಮೊದಲ ಪಂದ್ಯವನ್ನಾಡಿದ ಆರ್ಸಿಬಿ, ರಾಜಸ್ಥಾನ ರಾಯನ್ಸ್ ನೀಡಿದ 178 ರನ್ಗಳ ಗುರಿಯನ್ನ ಸುಲಭವಾಗಿ ಬೆನ್ನಟ್ಟುವಲ್ಲಿ ಯಶಸ್ವಿಯಾಯ್ತು. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ದೇವದತ್ ಪಡಿಕಲ್ ತಮ್ಮ ಮೊದಲ ಐಪಿಎಲ್ ಶತಕವನ್ನ ಸಿಡಿಸಿದ್ರೆ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಸೀಸನ್ನಲ್ಲೇ 6000 ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದ್ರು.
ಇನ್ನು ಪಂದ್ಯದಲ್ಲಿ 34 ಬಾಲ್ ಗಳಿಗೆ ಅರ್ಧ ಶತಕವನ್ನ ಸಿಡಿಸಿದ್ದ ವಿರಾಟ್ ಕೊಹ್ಲಿ ಈ ಸೀಸನ್ನ ಮೊದಲ ಅರ್ಧ ಶತಕವನ್ನ ಮುದ್ದಿನ ಮಗಳು ವಮಿಕಾಗೆ ಅರ್ಪಿಸಿದ್ದಾರೆ.
ಆರ್ಸಿಬಿ ಆಡಳಿತ ವರ್ಗ ಆಟಗಾರರ ಕುಟುಂಬಸ್ಥರಿಗೆ ಆಟಗಾರರ ಜೊತೆ ಇರಲು ಅವಕಾಶ ನೀಡಿದೆ. ಹೀಗಾಗಿ ಕೊಹ್ಲಿ ಪತ್ನಿ ಹಾಗೂ ಪುತ್ರಿ ಕೂಡ ಐಪಿಎಲ್ ಪ್ರವಾಸದಲ್ಲಿದ್ದಾರೆ. ಅನುಷ್ಕಾ 2020ರಲ್ಲೂ ಕೊಹ್ಲಿ ಜೊತೆ ಯುಎಇಗೆ ಪ್ರಯಾಣ ಬೆಳೆಸಿದ್ದರು.
ಈ ವರ್ಷದ ಜನವರಿಯಲ್ಲಿ ಕೊಹ್ಲಿ – ಅನುಷ್ಕಾ ದಂಪತಿ ಹೆಣ್ಣು ಮಗುವನ್ನ ಬರಮಾಡಿಕೊಂಡಿದ್ದರು. ಇದೀಗ ಐಪಿಎಲ್ ಸೀಸನ್ನಲ್ಲಿ ಮಿಂಚುತ್ತಿರುವ ಕೊಹ್ಲಿ ಮಗಳಿಗೆ ತಮ್ಮ ಸಾಧನೆಯನ್ನ ಅರ್ಪಿಸಿದ್ದು, ಈ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
https://www.instagram.com/p/CN-f-0Ll4mb/?utm_source=ig_web_copy_link
https://twitter.com/ViratFanTrends/status/1385289256277405702