ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬಾರ್ಡರ್ – ಗವಾಸ್ಕರ್ ಟ್ರೋಫಿಗೆ ಮುಂಚಿತವಾಗಿ ಬಿಸಿಸಿಐ ಪಿತೃತ್ವ ರಜೆ ನೀಡಿದೆ.
ಭಾರತದ ಮೂರು ದಿನಗಳ ಏಕದಿನ ಪಂದ್ಯ, ಅನೇಕ ಟಿ 20 ಪಂದ್ಯ ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಈ ಸರಣಿ ನವೆಂಬರ್ 27ರಿಂದಲೇ ಸಿಡ್ನಿಯಲ್ಲಿ ಏಕದಿನ ಪಂದ್ಯದೊಂದಿಗೆ ಆರಂಭವಾಗಿದೆ. ಬಹುನಿರೀಕ್ಷಿತ ಟೆಸ್ಟ್ ಪಂದ್ಯ ಡಿಸೆಂಬರ್ 17ರಿಂದ ಅಡಿಲೇಡ್ನಲ್ಲಿ ನಡೆಯಲಿದೆ.
ಅಡಿಲೇಡ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಮುನ್ನಡೆಸಲಿರುವ ಕೊಹ್ಲಿ ಬಳಿಕ ಸ್ವದೇಶಕ್ಕೆ ಮರಳಲಿದ್ದಾರೆ. ಟೀಂ ಇಂಡಿಯಾ ನಾಯಕನಿಗೆ ಪಿತೃತ್ವ ರಜೆ ನೀಡಿದ ಬಿಸಿಸಿಐ ಕ್ರಮಕ್ಕೆ ಕೆಲವರು ಪ್ರಶಂಸೆ ಮಾಡಿದ್ರೆ ಇನ್ನೂ ಕೆಲವರು ಇದು ತಪ್ಪು ಎಂದಿದ್ದಾರೆ.
ಈ ನಡುವೆ 1975-76ರಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಆಡುತ್ತಿದ್ದಾಗ ನಾನು ಪಿತೃತ್ವ ರಜೆ ಕೇಳಿರಲಿಲ್ಲ ಅಂತಾ ಟೀಂ ಇಂಡಿಯಾ ಮಾಜಿ ಆಟಗಾರ ಸುನಿಲ್ ಗಾವಸ್ಕರ್ ಹೇಳಿದ್ದಾರೆ. ಯಾಕಂದ್ರೆ ನಾನು ಅಲ್ಲಿರದಿದ್ದರೂ ನನ್ನ ಪತ್ನಿ ಮಗುವಿಗೆ ಜನ್ಮ ನೀಡುತ್ತಿದ್ದಳು. ಆ ಸಮಯದಲ್ಲಿ ನನ್ನ ಅವಶ್ಯಕತೆ ಟೀಂ ಇಂಡಿಯಾಗೆ ಹೆಚ್ಚಿದೆ ಎಂದು ನನಗನಿಸಿತ್ತು ಎಂದಿದ್ದಾರೆ.