alex Certify ವಿರಾಟ್ ಕೊಹ್ಲಿಗೆ ಪಿತೃತ್ವ ರಜೆ ನೀಡಿದ್ದಕ್ಕೆ ಕೇಳಿಬಂತು ಅಪಸ್ವರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್ ಕೊಹ್ಲಿಗೆ ಪಿತೃತ್ವ ರಜೆ ನೀಡಿದ್ದಕ್ಕೆ ಕೇಳಿಬಂತು ಅಪಸ್ವರ…!

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಬಾರ್ಡರ್​ – ಗವಾಸ್ಕರ್​ ಟ್ರೋಫಿಗೆ ಮುಂಚಿತವಾಗಿ ಬಿಸಿಸಿಐ ಪಿತೃತ್ವ ರಜೆ ನೀಡಿದೆ.

ಭಾರತದ ಮೂರು ದಿನಗಳ ಏಕದಿನ ಪಂದ್ಯ, ಅನೇಕ ಟಿ 20 ಪಂದ್ಯ ಹಾಗೂ ನಾಲ್ಕು ಟೆಸ್ಟ್​ ಪಂದ್ಯಗಳನ್ನ ಆಡಲಿದೆ. ಈ ಸರಣಿ ನವೆಂಬರ್​ 27ರಿಂದಲೇ ಸಿಡ್ನಿಯಲ್ಲಿ ಏಕದಿನ ಪಂದ್ಯದೊಂದಿಗೆ ಆರಂಭವಾಗಿದೆ. ಬಹುನಿರೀಕ್ಷಿತ ಟೆಸ್ಟ್ ಪಂದ್ಯ ಡಿಸೆಂಬರ್​ 17ರಿಂದ ಅಡಿಲೇಡ್​ನಲ್ಲಿ ನಡೆಯಲಿದೆ.

ಅಡಿಲೇಡ್​ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಮುನ್ನಡೆಸಲಿರುವ ಕೊಹ್ಲಿ ಬಳಿಕ ಸ್ವದೇಶಕ್ಕೆ ಮರಳಲಿದ್ದಾರೆ. ಟೀಂ ಇಂಡಿಯಾ ನಾಯಕನಿಗೆ ಪಿತೃತ್ವ ರಜೆ ನೀಡಿದ ಬಿಸಿಸಿಐ ಕ್ರಮಕ್ಕೆ ಕೆಲವರು ಪ್ರಶಂಸೆ ಮಾಡಿದ್ರೆ ಇನ್ನೂ ಕೆಲವರು ಇದು ತಪ್ಪು ಎಂದಿದ್ದಾರೆ.

ಈ ನಡುವೆ 1975-76ರಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್​ ವಿರುದ್ಧ ಆಡುತ್ತಿದ್ದಾಗ ನಾನು ಪಿತೃತ್ವ ರಜೆ ಕೇಳಿರಲಿಲ್ಲ ಅಂತಾ ಟೀಂ ಇಂಡಿಯಾ ಮಾಜಿ ಆಟಗಾರ ಸುನಿಲ್​ ಗಾವಸ್ಕರ್​ ಹೇಳಿದ್ದಾರೆ. ಯಾಕಂದ್ರೆ ನಾನು ಅಲ್ಲಿರದಿದ್ದರೂ ನನ್ನ ಪತ್ನಿ ಮಗುವಿಗೆ ಜನ್ಮ ನೀಡುತ್ತಿದ್ದಳು. ಆ ಸಮಯದಲ್ಲಿ ನನ್ನ ಅವಶ್ಯಕತೆ ಟೀಂ ಇಂಡಿಯಾಗೆ ಹೆಚ್ಚಿದೆ ಎಂದು ನನಗನಿಸಿತ್ತು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...