
ರವಿವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ 20 ಪಂದ್ಯದಲ್ಲಿ ಕೊಹ್ಲಿ ಅದ್ಭುತ ಸಿಕ್ಸ್ ಬಾರಿಸಿದ್ದು ಅಭಿಮಾನಿಗಳು ಎಬಿಡಿ ವಿಲಿಯರ್ಸ್ನ್ನ ಜ್ಞಾಪಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ನೀಡಿದ 195 ರನ್ಗಳ ಗುರಿ ಬೆನ್ನತ್ತಿದ ಶಿಖರ್ ಧವನ್, ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಮೈದಾನಕ್ಕಿಳಿದ ಕೆ.ಎಲ್. ರಾಹುಲ್ ಹಾಗೂ ಶಿಖರ್ ಧವನ್ 5 ಓವರ್ ಆಗುವಷ್ಟರಲ್ಲಿ ತಂಡದ ಮೊತ್ತವನ್ನ 50ರ ಗಡಿ ದಾಟಿಸಿದ್ರು. ಆದರೆ ತಂಡಕ್ಕೆ 30 ರನ್ ಸೇರಿಸಿಕೊಟ್ಟಿಟ್ಟ ರಾಹುಲ್ 22ನೇ ಎಸೆತದಲ್ಲಿ ಪೆವಿಲಿಯನ್ ಹಾದಿ ಹಿಡಿದ್ರು.
ಬಳಿಕ ಧವನ್ ಜೊತೆಯಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ರನ್ ಸೇರಿಸುವ ಮೂಲಕ ಅರ್ಧ ಶತಕ ಬಾರಿಸಿದ್ರು. ಆಂಡ್ರ್ಯೂ ಟೈಸ್ ಬೌಲಿಂಗ್ ವೇಳೆ ಕೊಹ್ಲಿ ಬಾರಿಸಿದ ಸಿಕ್ಸರ್ ಹೊಡೆತ ಅಭಿಮಾನಿಗಳಿಗೆ ಎಬಿಡಿ ವಿಲಿಯರ್ಸ್ರನ್ನ ಜ್ಞಾಪಿಸಿಕೊಳ್ಳುವಂತೆ ಮಾಡಿದೆ.
ಕೊಹ್ಲಿ ಸಿಕ್ಸರ್ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಲಾಗಿದ್ದು ನಾನಿಂದು ವಿಲಿಯರ್ಸ್ಗೆ ಮೆಸೇಜ್ ಮಾಡಿ ಶಾಟ್ ಹೇಗಿತ್ತು ಎಂದು ಕೇಳ್ತೇನೆ ಅಂತಾ ಕೊಹ್ಲಿ ಹೇಳುತ್ತಿರುವಂತೆ ಕ್ಯಾಪ್ಶನ್ ನೀಡಲಾಗಿದೆ. ಈ ಟ್ವೀಟ್ಗೆ ವಿಲಿಯರ್ಸ್ ಎಮೋಜಿಗಳ ಮೂಲಕ ಉತ್ತರ ನೀಡಿದ್ದಾರೆ.