alex Certify ಮಡದಿ ಪೋಸ್ಟ್‌ ಗೆ ಕೊಹ್ಲಿ ಮಾಡಿದ ಕಮೆಂಟ್ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಡದಿ ಪೋಸ್ಟ್‌ ಗೆ ಕೊಹ್ಲಿ ಮಾಡಿದ ಕಮೆಂಟ್ ವೈರಲ್

ಈ ಸೆಲೆಬ್ರಿಟಿಗಳು ಕೂತರೂ/ನಿಂತರೂ ದೊಡ್ಡ ಸುದ್ದಿಯಾಗುವ ಸಂದರ್ಭದಲ್ಲಿ, ಕ್ರಿಕೆಟರ್‌-ನಟಿ ದಂಪತಿಗೆ ಮಗುವಾಗುತ್ತಿರುವ ಸುದ್ದಿ ವೈರಲ್ ಆಗಲೇಬೇಕಲ್ಲವೇ…?

ಕಳೆದ ತಿಂಗಳು ಟೀಂ ಇಂಡಿಯಾ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಮಡದಿ, ಸಿನಿಮಾ ನಟಿ, ಅನುಷ್ಕಾ ಶರ್ಮಾ ತಮಗೆ ಜನವರಿ ವೇಳೆಗೆ ಮಗುವಾಗಲಿದ ಎಂದು ತಂತಮ್ಮ ಟ್ವಿಟರ್‌ ಖಾತೆಗಳಲ್ಲಿ ಘೋಷಿಸಿದ್ದರು. ಈ ವೇಳೆ ಇಬ್ಬರೂ ಸಹ ಜೊತೆಯಲ್ಲಿ ಫೋಟೋ ಶೇರ್‌ ಮಾಡಿಕೊಂಡಿದ್ದರು.

ಇದೀಗ ಅನುಷ್ಕಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮತ್ತೊಂದು ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದಾರೆ. “ನಿಮ್ಮೊಳಗೊಂದು ಜೀವ ಸೃಷ್ಟಿಯಾಗುವುದನ್ನು ಅರಿಯುವುದಕ್ಕಿಂತಲೂ ದೊಡ್ಡ ಅನುಭವ ಮತ್ತೊಂದು ಇರಲಾರದು” ಎಂದು ಕ್ಯಾಪ್ಷನ್‌ ಹಾಕಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ ಕೊಹ್ಲಿ, “ನನ್ನ ಇಡೀ ಜಗತ್ತೇ ಇದೊಂದು ಫ್ರೇಮ್‌ನಲ್ಲಿದೆ” ಎಂದು ಹೇಳಿದ್ದಾರೆ. ನಿರೀಕ್ಷೆಯಂತೆಯೇ ಸೆಲೆಬ್ರಿಟಿಗಳ ಅನುಯಾಯಿಗಳು ಇಬ್ಬರ ನಡುವಿನ ಈ ಸಂವಹನವನ್ನು ಎಂಜಾಯ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...