ಐಸಿಸಿ,ಅಂತರಾಷ್ಟ್ರೀಯ ಟಿ-20 ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಉಪನಾಯಕ ರೋಹಿತ್ ಶರ್ಮಾ 14ನೇ ಸ್ಥಾನಕ್ಕೇರಿದ್ದಾರೆ.
ರೋಹಿತ್ ಶರ್ಮಾ,ಇಂಗ್ಲೆಂಡ್ ವಿರುದ್ಧ ನಡೆದ ಕೊನೆಯ ಟಿ-20 ಪಂದ್ಯದಲ್ಲಿ 34 ಎಸೆತಗಳಿಗೆ 64 ರನ್ ಗಳಿಸಿದ್ದರು. ನಾಯಕ ಕೊಹ್ಲಿ ಟಿ 20 ಸರಣಿಯಲ್ಲಿ ಅತಿ ಹೆಚ್ಚು 231 ರನ್ ಗಳಿಸಿದ್ದರು. ಈ ಸರಣಿಯಲ್ಲಿ ಕೊಹ್ಲಿ 3 ಅರ್ಧಶತಕ ಗಳಿಸಿದ್ದರು.
ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ರಾಹುಲ್ ಒಂದು ಅಂಕ ಕೆಳಗಿಳಿದಿದ್ದಾರೆ. ಅವರು ನಾಲ್ಕನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಮಲನ್ 892 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 830 ಅಂಕದೊಂದಿಗೆ ಆರೋನ್ ಫಿಂಚ್ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ನಾಯಕ ಬಾಬರ್ ಅಜಮ್ 801 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.