alex Certify ಹಾರ್ದಿಕ್ ಪಾಂಡ್ಯ ಮಾಡಿದ ವರ್ಕೌಟ್ ಗೆ ಕೊಹ್ಲಿಯಿಂದ ಮತ್ತೊಂದು ಚಾಲೆಂಜ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ್ದಿಕ್ ಪಾಂಡ್ಯ ಮಾಡಿದ ವರ್ಕೌಟ್ ಗೆ ಕೊಹ್ಲಿಯಿಂದ ಮತ್ತೊಂದು ಚಾಲೆಂಜ್…!

ಕೊರೊನಾದಿಂದಾಗಿ ಮನೆಯಿಂದ ಹೊರ ಬರೋದಿಕ್ಕೂ ಜನ ಹೆದರುವಂತಾಗಿದೆ. ಅತ್ತ ಸೆಲಿಬ್ರಿಟಿಗಳು ಕೂಡ ಮನೆಯಿಂದ ಹೊರ ಬರದೇ ಮನೆಯಲ್ಲಿಯೇ ವರ್ಕೌಟ್ ಮಾಡುತ್ತಾ ಮನೆ ಮಂದಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅದೇ ರೀತಿ ಕೊಹ್ಲಿ ಕೂಡ ವರ್ಕೌಟ್ ಮಾಡುತ್ತಾ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ‌. ಇದರ ವಿಡಿಯೋ ಕೂಡ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಆದರೆ ಇದೀಗ ಕೊಹ್ಲಿ ವರ್ಕೌಟ್ ನ ವಿಭಿನ್ನ ವಿಡಿಯೋ ಒಂದು ಸಾಮಾಜಿಕ‌ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೋ ಹಾಕುವುದಕ್ಕೂ ಒಂದು ಕಾರಣ ಇದೆ. ಈ ವಿಡಿಯೋಗೆ ಪ್ರೇರಣೆ ಅಂದರೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಂತೆ.

ಹೌದು, ಪಾಂಡ್ಯ ಇತ್ತೀಚೆಗೆ ಕಪ್ಪೆಯಂತೆ ಹಾರುತ್ತಾ ಪುಷ್ ಅಪ್ ವರ್ಕೌಟ್ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿದ ಕೊಹ್ಲಿ ಈಗ ಆ ವರ್ಕೌಟ್ ಚಾಲೆಂಜ್ ಗೆ ಟ್ವಿಸ್ಟ್ ಕೊಟ್ಟಿದ್ದಾರೆ. ಅವರು ಕೂಡ ವಿಭಿನ್ನ ಚಾಲೆಂಜ್ ನೀಡಿದ್ದಾರೆ. ಕೊಹ್ಲಿ ಹಾರಿ ಪುಷ್ ಅಪ್ ಮಾಡುವಾಗ ನೆಲಕ್ಕೆ ಕೈ ಸೋಕಿಸುವ ಮೊದಲು ಚಪ್ಪಾಳೆ ತಟ್ಟುವ ಕಠಿಣ ವರ್ಕೌಟ್ ಚಾಲೆಂಜ್ ನೀಡಿದ್ದಾರೆ. ಇದು ಎಲ್ಲರ ಗಮನ ಸೆಳೆಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...