alex Certify 2020ರಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದ ಟ್ವೀಟ್​ ಯಾರದ್ದು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020ರಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದ ಟ್ವೀಟ್​ ಯಾರದ್ದು ಗೊತ್ತಾ..?

2020ರ ವರ್ಷ ಕೊನೆಯಾಗಲು ಇನ್ನೇನು ಒಂದು ತಿಂಗಳು ಬಾಕಿ ಉಳಿದಿದೆ. ಈ ವರ್ಷ ಟ್ವಿಟರ್​ ಅತಿ ಹೆಚ್ಚು ಲೈಕ್​ ಪಡೆದ ಪೋಸ್ಟ್ ಯಾವುದು ಅಂದರೆ ನೀವು ಕೊರೊನಾಗೆ ಸಂಬಂಧಿಸಿದ ಯಾವುದಾದರೊಂದು ವಿಚಾರ ಇದ್ದಿರಬಹುದೆಂದು ಊಹಿಸಿರಬಹುದು. ಆದರೆ ಈ ವರ್ಷ ಅತಿ ಹೆಚ್ಚು ಲೈಕ್​ ಪಡೆದ ಪೋಸ್ಟ್ ಅನುಶ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಪೋಷಕರಾಗುತ್ತಿದ್ದೇವೆ ಎಂದು ಸುದ್ದಿ ನೀಡಿದ ಟ್ವೀಟ್​ ಆಗಿದೆ.

ಟ್ವಿಟರ್​ ಇಂಡಿಯಾ ಸಂಸ್ಥೆ ಇಡೀ ವರ್ಷದ ಎಲ್ಲಾ ಟ್ವೀಟ್​ಗಳನ್ನ ರೀಕಾಲ್​ ಮಾಡಿದ್ದು ಇದರಲ್ಲಿ ವಿರಾಟ್​ ಕೊಹ್ಲಿ ತಮ್ಮ ಪತ್ನಿ ಗರ್ಭಿಣಿ ಎಂದು ಅನೌನ್ಸ್​ ಮಾಡಿದ ಟ್ವೀಟ್​ ಈ ವರ್ಷದಲ್ಲಿ ಅತಿ ಹೆಚ್ಚು ಲೈಕ್​ ಪಡೆದ ಪೋಸ್ಟ್ ಆಗಿದೆ.

ಆಗಸ್ಟ್ 27ರಂದು ವಿರಾಟ್​ ಕೊಹ್ಲಿ ಇನ್ಸ್​ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ತಾನು ತಂದೆಯಾಗುತ್ತಿದ್ದೇನೆ ಎಂಬ ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ರು. ಪತ್ನಿಯ ಜೊತೆಗಿನ ಫೋಟೋ ಶೇರ್​ ಮಾಡಿದ್ದ ವಿರಾಟ್​​ ನಾವಿನ್ನು ಮೂವರಾಗುತ್ತಿದ್ದೇವೆ. 2021ಕ್ಕೆ ಮಗುವಿನ ಆಗಮನವಾಗಲಿದೆ ಎಂದು ಬರೆದುಕೊಂಡಿದ್ದರು.

ಈ ವರ್ಷ ಅತೀ ಹೆಚ್ಚು ಬಳಕೆಯಾದ ಹ್ಯಾಶ್​ಟ್ಯಾಗ್​ ಕೋವಿಡ್​ 19(#Covid19) ಆಗಿದೆ.

— Virat Kohli (@imVkohli) August 27, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...