
ಟ್ವಿಟರ್ ಇಂಡಿಯಾ ಸಂಸ್ಥೆ ಇಡೀ ವರ್ಷದ ಎಲ್ಲಾ ಟ್ವೀಟ್ಗಳನ್ನ ರೀಕಾಲ್ ಮಾಡಿದ್ದು ಇದರಲ್ಲಿ ವಿರಾಟ್ ಕೊಹ್ಲಿ ತಮ್ಮ ಪತ್ನಿ ಗರ್ಭಿಣಿ ಎಂದು ಅನೌನ್ಸ್ ಮಾಡಿದ ಟ್ವೀಟ್ ಈ ವರ್ಷದಲ್ಲಿ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಆಗಿದೆ.
ಆಗಸ್ಟ್ 27ರಂದು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ನಲ್ಲಿ ತಾನು ತಂದೆಯಾಗುತ್ತಿದ್ದೇನೆ ಎಂಬ ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ರು. ಪತ್ನಿಯ ಜೊತೆಗಿನ ಫೋಟೋ ಶೇರ್ ಮಾಡಿದ್ದ ವಿರಾಟ್ ನಾವಿನ್ನು ಮೂವರಾಗುತ್ತಿದ್ದೇವೆ. 2021ಕ್ಕೆ ಮಗುವಿನ ಆಗಮನವಾಗಲಿದೆ ಎಂದು ಬರೆದುಕೊಂಡಿದ್ದರು.
ಈ ವರ್ಷ ಅತೀ ಹೆಚ್ಚು ಬಳಕೆಯಾದ ಹ್ಯಾಶ್ಟ್ಯಾಗ್ ಕೋವಿಡ್ 19(#Covid19) ಆಗಿದೆ.