alex Certify ಕೊಹ್ಲಿಯನ್ನ ಟ್ರೋಲ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಪೊಲೀಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿಯನ್ನ ಟ್ರೋಲ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಪೊಲೀಸ್…!

ಜನರಿಗೆ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ರಾಜ್ಯಗಳಲ್ಲಿ ಪೊಲೀಸರು ಸಾಮಾಜಿಕ ಜಾಲತಾಣದ ನೆರವನ್ನ ಪಡೆಯುತ್ತಿರೋ ವಿಚಾರ ಎಲ್ಲರಿಗೂ ತಿಳಿದಿರೋದೇ. ಇದೇ ರೀತಿಯಲ್ಲಿ ಜನರಿಗೆ ಟ್ವಿಟರ್​ನಲ್ಲಿ ಹೆಲ್ಮೆಟ್​ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಹೋದ ಉತ್ತರಾಖಂಡ್​ ಪೊಲೀಸರು ಪೇಚಿಗೆ ಸಿಲುಕಿದ್ದಾರೆ.

ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್​ ವಿರುದ್ಧದ ಟಿ 20 ಸರಣಿಯಲ್ಲಿ ಶೂನ್ಯ ಸಂಪಾದನೆ ಮಾಡಿದ ಕೊಹ್ಲಿ ವಿಚಾರವನ್ನೇ ಇಟ್ಟುಕೊಂಡ ಉತ್ತರಾಖಂಡ್​ ಪೊಲೀಸರು, ಹೆಲ್ಮೆಟ್​ ಧರಿಸಿದ್ರೆ ಮಾತ್ರ ಸಾಲದು. ಎಚ್ಚರಿಕೆಯಿಂದ ಬೈಕ್​ ಚಾಲನೆ ಮಾಡೋದೂ ಕೂಡ ಅವಶ್ಯಕ. ಇಲ್ಲವಾದಲ್ಲಿ ನೀವು ಕೂಡ ಶೂನ್ಯದಲ್ಲೇ ಔಟ್​ ಆಗ್ತೀರಾ ಎಂದು ಟ್ವೀಟ್​ ಮಾಡಿದ್ದರು.

ಆದರೆ ಈ ಟ್ವೀಟ್​ಗೆ ಕೊಹ್ಲಿ ಅಭಿಮಾನಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಉತ್ತರಾಖಂಡ್​ ಪೊಲೀಸರ ಈ ನಡೆಗೆ ಖಂಡನೆ ವ್ಯಕ್ತವಾಗ್ತಿದ್ದಂತೆಯೇ ಈ ಟ್ವೀಟ್​ನ್ನು ಡಿಲೀಟ್​ ಮಾಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...