
ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಶೂನ್ಯ ಸಂಪಾದನೆ ಮಾಡಿದ ಕೊಹ್ಲಿ ವಿಚಾರವನ್ನೇ ಇಟ್ಟುಕೊಂಡ ಉತ್ತರಾಖಂಡ್ ಪೊಲೀಸರು, ಹೆಲ್ಮೆಟ್ ಧರಿಸಿದ್ರೆ ಮಾತ್ರ ಸಾಲದು. ಎಚ್ಚರಿಕೆಯಿಂದ ಬೈಕ್ ಚಾಲನೆ ಮಾಡೋದೂ ಕೂಡ ಅವಶ್ಯಕ. ಇಲ್ಲವಾದಲ್ಲಿ ನೀವು ಕೂಡ ಶೂನ್ಯದಲ್ಲೇ ಔಟ್ ಆಗ್ತೀರಾ ಎಂದು ಟ್ವೀಟ್ ಮಾಡಿದ್ದರು.
ಆದರೆ ಈ ಟ್ವೀಟ್ಗೆ ಕೊಹ್ಲಿ ಅಭಿಮಾನಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಉತ್ತರಾಖಂಡ್ ಪೊಲೀಸರ ಈ ನಡೆಗೆ ಖಂಡನೆ ವ್ಯಕ್ತವಾಗ್ತಿದ್ದಂತೆಯೇ ಈ ಟ್ವೀಟ್ನ್ನು ಡಿಲೀಟ್ ಮಾಡಲಾಗಿದೆ.
https://twitter.com/reddykesava/status/1370558966552403970