ಬಿಸಿಸಿಐ ಅಧ್ಯಕ್ಷ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕಳೆದ ನಾಲ್ಕೂವರೆ ತಿಂಗಳಲ್ಲಿ 22 ಬಾರಿ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ನಾಲ್ಕೂವರೆ ತಿಂಗಳಲ್ಲಿ ನಾನು ಬರೋಬ್ಬರಿ 22 ಬಾರಿ ಕೋವಿಡ್ ಟೆಸ್ಟ್ಗೆ ಒಳಗಾಗಿದ್ದಾನೆ. ಸಂತಸಕರ ವಿಚಾರ ಅಂದರೆ ಇದರಲ್ಲಿ ನಾನು ಒಮ್ಮೆಯೂ ಪಾಸಿಟಿವ್ ಎಂಬ ರಿಪೋರ್ಟ್ ಪಡೆದಿಲ್ಲ. ನನ್ನ ಸುತ್ತಮುತ್ತವೇ ಕೊರೊನಾ ಕೇಸ್ ಇದ್ದರೂ ಸಹ ನಾನು ಮಾತ್ರ ಕೊರೊನಾ ನೆಗೆಟಿವ್ ರಿಪೋರ್ಟ್ ಪಡೆಯುತ್ತಾ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.