alex Certify BREAKING: ಇತಿಹಾಸ ನಿರ್ಮಿಸಿದ ಭಾವಿನಾ ಬೆನ್ ಪಟೇಲ್ ಫೈನಲ್ ಗೆ ಎಂಟ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಇತಿಹಾಸ ನಿರ್ಮಿಸಿದ ಭಾವಿನಾ ಬೆನ್ ಪಟೇಲ್ ಫೈನಲ್ ಗೆ ಎಂಟ್ರಿ

ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಮಹಿಳಾ ಸಿಂಗಲ್ಸ್ ಕ್ಲಾಸ್ 4 ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾವಿನಾಬೆನ್ ಪಟೇಲ್ ಫೈನಲ್ ತಲುಪುವ ಮೂಲಕ ಇತಿಹಾಸ ಬರೆದಿದ್ದಾರೆ. ಅವರು ಭಾನುವಾರ ಚಿನ್ನದ ಪದಕಕ್ಕಾಗಿ ಸ್ಪರ್ಧೆ ನಡೆಸಲಿದ್ದು, ಸೋತರೂ ಬೆಳ್ಳಿ ಪದಕವಂತೂ ಖಚಿತವಾಗಿದೆ.

ಭಾವಿನಾ ಬೆನ್ ಮೊದಲ ಗೇಮ್ ಅನ್ನು 7-11 ರಲ್ಲಿ ಕಳೆದುಕೊಂಡರು, ಆದರೆ ನಂತರ 11-7, 11-4ರಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದರು. ಐದನೇ ಆಟವನ್ನು ಆರಂಭಿಸಿ ಸತತ ಆರು ಅಂಕಗಳನ್ನು ಗೆದ್ದರು. ಆದರೆ, ನಂತರ ಮೂರು ಪಂದ್ಯಗಳನ್ನು ಕಳೆದುಕೊಂಡರೂ ನಂತರ ಪಂದ್ಯವನ್ನು ಗೆಲ್ಲಲು ಅವರು 11-8 ಗೇಮ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ತನ್ನ 12 ನೇ ವಯಸ್ಸಿನಲ್ಲಿ ಪೋಲಿಯೋ ರೋಗಕ್ಕೆ ತುತ್ತಾದ 34 ವರ್ಷದ ಭಾವಿನಾ 18 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತನ್ನ ಸರ್ಬಿಯಾದ ಎದುರಾಳಿಯನ್ನು 11-5 11-6 11-7 ಅಂತರದಿಂದ ಸೋಲಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...