ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 11 ನೇ ಪದಕ ಬಂದಿದೆ. ಹೈ ಜಂಪರ್ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಪುರುಷರ ಹೈ ಜಂಪ್ ಟಿ 64 ಫೈನಲ್ನಲ್ಲಿ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಜಯಿಸಿದ್ದಾರೆ.
ಚಿನ್ನ: ಜೊನಾಥನ್ ಬ್ರೂಮ್ -ಎಡ್ವರ್ಡ್ಸ್ – 2.10 ಮೀ (ಜಿಬಿಆರ್)
ಬೆಳ್ಳಿ: ಪ್ರವೀಣ್ ಕುಮಾರ್ – 2.07 ಮೀ (IND)
ಕಂಚು: ಮ್ಯಾಕೀಜ್ ಲೆಪಿಯಾಟೊ – 2.04 ಮೀ (ಪಿಒಎಲ್)
ಹೈ ಜಂಪರ್ ಪ್ರವೀಣ್ ಕುಮಾರ್ ಅವರು ಪುರುಷರ ಹೈ ಜಂಪ್ ಟಿ 64 ಫೈನಲ್ನಲ್ಲಿ 2.07 ಮೀಟರ್ ಏಷ್ಯನ್ ದಾಖಲೆಯೊಂದಿಗೆ ಬೆಳ್ಳಿ ಪದಕ ಪಡೆದಿದ್ದಾರೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ತನ್ನ 11 ನೇ ಪದಕವನ್ನು ಗೆದ್ದಿದೆ.