alex Certify BREAKING NEWS: ಟೋಕಿಯೊ ಒಲಿಂಪಿಕ್ಸ್ ನಲ್ಲಿ ‘ಬೆಳ್ಳಿತಾರೆ’ ಪಿ.ವಿ. ಸಿಂಧು ಗೆಲುವಿನೊಂದಿಗೆ ಶುಭಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಟೋಕಿಯೊ ಒಲಿಂಪಿಕ್ಸ್ ನಲ್ಲಿ ‘ಬೆಳ್ಳಿತಾರೆ’ ಪಿ.ವಿ. ಸಿಂಧು ಗೆಲುವಿನೊಂದಿಗೆ ಶುಭಾರಂಭ

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಪಿ.ವಿ. ಸಿಂಧು ಶುಭಾರಂಭ ಮಾಡಿದ್ದಾರೆ. ಭಾನುವಾರ ನಡೆದ ತನ್ನ ಮೊದಲ ಗುಂಪು ಹಂತದ ಪಂದ್ಯದಲ್ಲಿ ಇಸ್ರೇಲ್‌ನ ಕ್ಸೆನಿಯಾ ಪೋಲಿಕಾರ್ಪೋವಾ ಅವರನ್ನು 21-7, 21-10 ಸೆಟ್‌ಗಳಿಂದ ಸೋಲಿಸಿದರು.

ಮುಸಶಿನೋ ಫಾರೆಸ್ಟ್ ಪ್ಲಾಜಾದಲ್ಲಿ ಭಾನುವಾರ ನಡೆದ ಗುಂಪು ಹಂತದ ಪಂದ್ಯದಲ್ಲಿ 6 ನೇ ಶ್ರೇಯಾಂಕದ ಪಿ.ವಿ. ಸಿಂಧು ಗೆಲುವಿನೊಂದಿಗೆ ಒಲಿಂಪಿಕ್ಸ್ ನಲ್ಲಿ ಹೆಜ್ಜೆ ಇಟ್ಟಿದ್ದು, ಇಸ್ರೇಲ್‌ನ ಶ್ರೇಯಾಂಕವಿಲ್ಲದ ಕ್ಸೆನಿಯಾ ಪೋಲಿಕಾರ್ಪೋವಾ ಅವರನ್ನು ನೇರ ಪಂದ್ಯಗಳಲ್ಲಿ ಕೇವಲ 29 ನಿಮಿಷಗಳಲ್ಲಿ ಸೋಲಿಸಿದರು.

ರಿಯೊ ಒಲಿಂಪಿಕ್ಸ್ ನಲ್ಲಿ ಸಿಂಧು ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಸಿಂಧು ಮುಂದಿನ ಬುಧವಾರ ಚೆಯುಂಗ್ ನ್ಗಾನ್ ಯಿ ಅವರನ್ನು ಎದುರಿಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...