
ಹಾರ್ದಿಕ್ ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ಕಳೆದ ಶನಿವಾರ ಹೃದಾಯಾಘಾತದಿಂದ ನಿಧನರಾಗಿದ್ದರು.
ವಡೋದರಾದಲ್ಲಿ ಹಾರ್ದಿಕ್ ತಂದೆಯ ಅಂತಿಮ ವಿಧಿ ವಿಧಾನಗಳನ್ನ ನೆರವೇರಿಸಲಾಗಿತ್ತು.
ತಂದೆಯ ಜೊತೆಗಿದ್ದ ತಮ್ಮ ಬಾಲ್ಯದ ಫೋಟೋ ಹಾಗೂ ವಿಡಿಯೋಗಳನ್ನ ಶೇರ್ ಮಾಡಿದ್ದು, ಟು ಡ್ಯಾಡ್ ಎಂದು ಶೀರ್ಷಿಕೆ ನೀಡಿದ್ದಾರೆ.
ಒಂದು ವಿಡಿಯೋದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಹಾರ್ದಿಕ್ ತಂದೆಗೆ ನಿಮ್ಮ ಇಬ್ಬರು ಪುತ್ರರನ್ನ ಕಂಡು ದೇಶವೇ ಹೆಮ್ಮೆ ಪಡುತ್ತಿದೆ ಎಂದು ಹೊಗಳಿದ್ದರು.