ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕಾಶ್ಮೀರದ ಮೊದಲ ಮಹಿಳಾ ವೇಟ್ ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೈಮಾ ಅವರ ಪತಿ ಉಬೈಜ್ ಹಫೀಜ್ ಅವರಿಂದ ಸ್ಫೂರ್ತಿ ಪಡೆದು ಈ ಸಾಧನೆ ಮಾಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಸೈಮಾ, ನಾನು ಜಿಮ್ಗೆ ಸೇರಿದಾಗ ನನ್ನ ತೂಕ ಹೆಚ್ಚಾಗಿತ್ತು. ನನ್ನ ತೂಕವನ್ನ ಕಳೆದುಕೊಳ್ಳಲು ನನಗೆ ನನ್ನ ಪತಿ ಸಹಾಯ ಮಾಡಿದ್ರು. ನನ್ನ ಪತಿಯೇ ನನಗೆ ತರಬೇತಿ ನೀಡಿದ್ರು ಎಂದು ಹೇಳಿದ್ದಾರೆ.
27 ವರ್ಷದ ಸೈಮಾ, ನಾಲ್ಕನೇ ವರ್ಷದ ಪವರ್ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕಾರ್ಯಕ್ರಮದಲ್ಲಿ ಸೈಮಾ 255 ಕೆಜಿ ತೂಕವನ್ನ ಎತ್ತಿದ್ದಾರೆ.
ಈ ದಂಪತಿ 2018ರಲ್ಲಿ ಮದುವೆಯಾಗಿದ್ದರು. ಆರೋಗ್ಯದ ಸಮಸ್ಯೆಯನ್ನ ಎದುರಿಸುತ್ತಿದ್ದ ಸೈಮಾಗೆ ವೈದ್ಯರು ಆಕೆ ಎಂದಿಗೂ ಗರ್ಭ ಧರಿಸಲು ಸಾಧ್ಯವಾಗೋದಿಲ್ಲ ಎಂದು ಹೇಳಿದ್ದರು. ಈ ಎಲ್ಲಾ ಸಮಸ್ಯೆಗಳನ್ನ ಎದುರಿಸಿ ಅವರು ಹೆಣ್ಣು ಮಗುವನ್ನ ಪಡೆದಿದ್ದಾರೆ.
ಹೆರಿಗೆಯಾದ ಬಳಿಕ ಸೈಮಾ ಬೆನ್ನು ಮೂಳೆಯ ಸಮಸ್ಯೆಯನ್ನ ಎದುರಿಸಿದ ಬಳಿಕ ವೈದ್ಯರು ಆಕೆಗೆ ತೂಕವನ್ನ ಇಳಿಸುವಂತೆ ಸಲಹೆ ನೀಡಿದ್ದರು. ಹೀಗಾಗಿ ಸೈಮಾ ತಮ್ಮ ತೂಕವನ್ನ ಸರಿಪಡಿಸಿಕೊಂಡಿದ್ದು ಮಾತ್ರವಲ್ಲದೇ ಈ ಸಾಧನೆಯನ್ನೂ ಮಾಡಿದ್ದಾರೆ.