
ಇಟಲಿಯ ಮಿಲನ್‌ನ ವೆರಾನೋ ಬ್ರಿಯಾನ್ಝಾದಲ್ಲಿರುವ ಎರಡನೇ ತರಗತಿ ಮಕ್ಕಳು ಬ್ಯಾಸ್ಕೆಟ್‌ಬಾಲ್ ಆಡುವುದನ್ನು ಕಲಿಯುತ್ತಿದ್ದಾರೆ. ಇದೇ ವೇಳೆ ಈ ಮಕ್ಕಳಿಗೆ ವೈವಿಧ್ಯತೆಯ ಪಾಠವೂ ಆಗುತ್ತಿದೆ.
ಜಿಂಕ್ ಹಾಗೂ ಆಂಟಿಬಯಾಟಿಕ್ಸ್ ಅಧಿಕ ಬಳಕೆಯಿಂದ ಬರುತ್ತಾ ಬ್ಲಾಕ್ ಫಂಗಸ್….?
ಮೇ ತಿಂಗಳ ಮಟ್ಟಿಗೆ ಈ ಮಕ್ಕಳಿಗೆ ಕೋಚ್ ಆಗಿ ಬಂದಿರುವುದು ಅಡೋಲ್ಫೋ ಡಾಮಿಯಾನ್ ಬೆರ್ಡುನ್ ಎಂಬ ಅರ್ಜೆಂಟೀನೀ-ಇಟಾಲಿಯನ್ ಗಾಲಿಕುರ್ಚಿ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್. ಬ್ಯೂನಸ್ ಐರೆಸ್‌ನಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ತಮ್ಮ 13ನೇ ವಯಸ್ಸಿನಲ್ಲಿ ಎಡಗಾಲು ಕಳೆದುಕೊಂಡ ಬೆರ್ಡುನ್, 39, ವರ್ಷಗಳಿಂದಲೂ ಅನೇಕ ಶಾಲೆಗಳಿಗೆ ತೆರಳಿ, ಅಂಗವೈಕಲ್ಯದ ನಡುವೆಯೂ ತಾವು ಹೇಗೆ ಬದುಕು ಸಾಗಿಸುತ್ತಿದ್ದಾರೆ ಎಂದು ಮಕ್ಕಳಿಗೆ ಹೇಳಿಕೊಟ್ಟು ಅವರಲ್ಲಿ ಸ್ಪೂರ್ತಿ ತುಂಬುತ್ತಿದ್ದಾರೆ.
ಕೋವಿಡ್ ಕೇರ್ ಸೆಂಟರ್ ನಿಂದಲೆ ಪರಾರಿಯಾದ ಸೋಂಕಿತರು; 8 ಜನರ ವಿರುದ್ಧ ಎಫ್ಐಆರ್
ಈ ಬಾರಿ ಇಲ್ಲಿನ ಸಬ್-ಅರ್ಬನ್ ಪ್ರಾಥಮಿಕ ಶಾಲೆಗೆ ಆಗಮಿಸಿದ ಬೆರ್ಡುನ್, ಅಲ್ಲಿನ ಮಕ್ಕಳಿಗೆ ಬ್ಯಾಸ್ಕೆಟ್‌ಬಾಲ್ ಜೊತೆಗೆ ಜೀವನದ ಪಾಠವನ್ನೂ ಕಲಿಸುತ್ತಿದ್ದಾರೆ.