ಟೆನ್ನಿಸ್ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದ ಜೊತೆ ಜೊತೆಗೆ ತಾಯ್ತನದ ಸವಾಲುಗಳನ್ನೂ ಎದುರಿಸುತ್ತಿದ್ದಾರೆ.
ಸಾನಿಯಾ ಮಿರ್ಜಾ ಅವರ ಓಡ್ ಟು ಆಲ್ ಮದರ್ಸ್ನಲ್ಲಿ ವಿಶ್ವದ ಎಲ್ಲ ತಾಯಂದಿರಿಗೆ ಪತ್ರ ಬರೆದಿರುವ ಸಾನಿಯಾ, ತಾಯಿ ಹಾಗೂ ಟೆನ್ನಿಸ್ ಆಟಗಾರ್ತಿ ಎಂದು ಬರೆದು ಸಹಿ ಹಾಕಿದ್ದಾರೆ.
34 ವರ್ಷದ ಸಾನಿಯಾ ಮಿರ್ಜಾ 2018ರಲ್ಲಿ ಇಝಾನ್ ಮಿರ್ಜಾ ಮಲಿಕ್ಗೆ ಜನ್ಮ ನೀಡಿದ್ದರು. 2 ವರ್ಷಗಳ ಬಳಿಕ ಟೆನ್ನಿಸ್ ಲೋಕಕ್ಕೆ ವಾಪಸ್ಸಾದ ಮಿರ್ಜಾ ಅಂತಾರಾಷ್ಟ್ರೀಯ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನ ಗೆದ್ದಿದ್ದಾರೆ.
ತಾಯ್ತನ ಹಾಗೂ ಕನಸು ಇವೆರಡರದಲ್ಲಿ ಒಂದನ್ನ ಮಹಿಳೆ ಆರಿಸಿಕೊಳ್ಳಬೇಕು ಎಂದು ಅನೇಕರು ಹೇಳುತ್ತಾರೆ. ಆದರೆ ನಾನು ಈ ಪತ್ರದಲ್ಲಿ ನನ್ನ ಜೀವನದ ಪ್ರಯಾಣವನ್ನ ಹಂಚಿಕೊಳ್ಳುತ್ತಿದ್ದೇನೆ. ಸೆರೆನಾ ವಿಲಿಯಮ್ಸ್ರ ಜೀವನ ಪ್ರಯಾಣದಿಂದ ಸ್ಪೂರ್ತಿ ಪಡೆದ ನಾನು ಅವರ ಬಗ್ಗೆಯೂ ಕೊಂಚ ಬರೆಯಲಿದ್ದೇನೆ ಎಂದಿದ್ದಾರೆ.