alex Certify ಟಿ20 ವಿಶ್ವಕಪ್ ನಲ್ಲಿ ಅಚ್ಚರಿ ಫಲಿತಾಂಶ: ಜಿಂಬಾಬ್ವೆ ಎದುರು ಒಂದೇ ಒಂದು ರನ್ ನಿಂದ ಸೋಲು ಕಂಡ ಪಾಕಿಸ್ತಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20 ವಿಶ್ವಕಪ್ ನಲ್ಲಿ ಅಚ್ಚರಿ ಫಲಿತಾಂಶ: ಜಿಂಬಾಬ್ವೆ ಎದುರು ಒಂದೇ ಒಂದು ರನ್ ನಿಂದ ಸೋಲು ಕಂಡ ಪಾಕಿಸ್ತಾನ

ಟಿ20 ವಿಶ್ವಕಪ್‌ ನಲ್ಲಿ ಪಾಕಿಸ್ತಾನವನ್ನು ಜಿಂಬಾಬ್ವೆ ಒಂದು ರನ್‌ನಿಂದ ಸೋಲಿಸಿದೆ. ಗುರುವಾರ ಪರ್ತ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಸೂಪರ್ 12 ಮುಖಾಮುಖಿಯಲ್ಲಿ ಜಿಂಬಾಬ್ವೆ ಕೇವಲ 1 ರನ್‌ ನಿಂದ ಪಾಕಿಸ್ತಾನವನ್ನು ಸೋಲಿಸಿತು.

ಮೊದಲಿಗೆ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿದೆ. ಜಿಂಬಾಬ್ವೆ ಪರವಾಗಿ ವೆಸ್ಲೆ ಮೆಡ್ವೇರ್ 17, ಕ್ರೇಗ್ ಇರ್ವೀನ್ 19, ಸಿಯಾನ್ ವಿಲಿಯಮ್ಸ್ 31, ಬ್ರಾಡ್ ಇವನ್ಸ್ 19 ರನ್ ಗಳಿಸಿದರು. ಪಾಕಿಸ್ತಾನ ಪರವಾಗಿ ಮೊಹಮ್ಮದ್ ವಾಸಿಂ 4, ಶಾದಾಬ್ ಖಾನ್ 3 ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿ ಸೋಲು ಕಂಡಿದೆ. ಶಾನ್ ಮಸೂದ್ 44, ಮೊಹಮ್ಮದ್ ರಿಜ್ವಾನ್ 14, ಶಾದಾಬ್ ಖಾನ್ 17, ಮೊಹಮ್ಮದ್ ನವಾಜ್ 22 ರನ್ ಗಳಿಸಿದರು. ಜಿಂಬಾಬ್ವೆ ಪರವಾಗಿ ಸಿಕಂದರ್ ರಝಾ 3, ಬ್ರಾಡ್ ಇವನ್ಸ್ 2 ವಿಕೆಟ್ ಪಡೆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...