alex Certify ಲಾಕಪ್‌ನಲ್ಲೇ ಹುಟ್ಟುಹಬ್ಬಆಚರಿಸಿಕೊಂಡ ಸುಶೀಲ್‌ ಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕಪ್‌ನಲ್ಲೇ ಹುಟ್ಟುಹಬ್ಬಆಚರಿಸಿಕೊಂಡ ಸುಶೀಲ್‌ ಕುಮಾರ್

Sushil Kumar Case : Sushil Kumar Wanted 'Wrestler's Diet' Under Police Custody, Spent Birthday In Lock-Up Instead

ಸಹ ಕುಸ್ತಿಪಟು ಸಾಗರ್‌ ರಾಣಾರ ಹತ್ಯೆ ಸಂಬಂಧ ಪೊಲೀಸ್ ಕಸ್ಟಡಿಯಲ್ಲಿರುವ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್‌‌ ಕಂಬಿಗಳ ಹಿಂದೆಯೇ ತಮ್ಮ 38ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ವಾರಗಳ ಕಾಲ ಶೋಧ ನಡೆಸಿದ ದೆಹಲಿ ಪೊಲೀಸರು ರಾಷ್ಟ್ರರಾಜಧಾನಿ ಪ್ರದೇಶದಲ್ಲೆಲ್ಲಾ ಹುಡುಕಾಡಿದ್ದಾರೆ. ದೆಹಲಿ ಪೊಲೀಸ್‌ನ ವಿಶೇಷ ಸೆಲ್ ಕೊನೆಗೂ ಸುಶೀಲ್‌ ಕುಮಾರ್‌ರನ್ನು ಪತ್ತೆ ಮಾಡಿದೆ.

ಹಿರಿಯ ನಾಗರಿಕರು, ವಿಕಲಚೇತನರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಸಿಸಿಟಿವಿ ಕ್ಯಾಮೆರಾದ ಫುಟೇಜ್ ವೀಕ್ಷಿಸಿ, ಅದರಲ್ಲಿ ಸಿಕ್ಕ ಸುಳಿವೊಂದನ್ನು ಆಧರಿಸಿ ಪೊಲೀಸರು ಸುಶೀಲ್ ಕುಮಾರ್‌ರನ್ನು ಬಂಧಿಸಿದ್ದಾರೆ. 23 ವರ್ಷ ವಯಸ್ಸಿನ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ ಕುಸ್ತಿಪಟು ಸಾಗರ್‌ ಕೊಲೆಯಲ್ಲಿ ಸುಶೀಲ್ ಕುಮಾರ್‌ ಪಾತ್ರವಿದೆ ಎಂಬ ಬಲವಾದ ಶಂಕೆ ಇದೆ.

30 ರ ನಂತ್ರ ಮದ್ವೆ ಆಗೋದಕ್ಕೆ ಹೊರಟಿದ್ದೀರಾ….? ಹಾಗಿದ್ರೆ ಇದನ್ನು ಓದಿ…..!

ತನಿಖೆ ವೇಳೆ ಕಣ್ಣೀರಿಟ್ಟ ಸುಶೀಲ್ ಕುಮಾರ್‌, ತನಗೆ ಸಾಗರ್‌ನನ್ನು ಕೊಲ್ಲುವ ಯಾವುದೇ ಉದ್ದೇಶವಿರಲಿಲ್ಲ ಎಂದಿದ್ದು, ಇಡೀ ರಾತ್ರಿ ನಿದ್ರೆ ಮಾಡದೇ ಇರುವುದಲ್ಲದೇ ಏನನ್ನೂ ತಿನ್ನಲು ನಿರಾಕರಿಸಿದ್ದಾರೆ.

ತನಗೆ ಕುಸ್ತಿ ಪಟು ತೆಗೆದುಕೊಳ್ಳುವ ಆಹಾರವನ್ನೇ ಕೊಡಬೇಕೆಂದು ವಿನಂತಿಸಿಕೊಂಡಿರುವ ಸುಶೀಲ್ ಕುಮಾರ್‌, ಪೊಲೀಸ್ ಮೆಸ್‌ನಲ್ಲಿ ಕೊಟ್ಟ ಊಟ ನಿರಾಕರಿಸಿದ್ದಾರೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...