ಬ್ರಿಸ್ಬೇನ್ನಲ್ಲಿ ಭಾರತ ತಂಡದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡ ಆಸ್ಟ್ರೇಲಿಯಾ ತಂಡದ ನಾಯಕ ಟಿಂ ಪೇನ್ ಹಾಗೂ ಸ್ಟೀವ್ ಸ್ಮಿತ್ ಬೆನ್ನು ಬಿದ್ದಿರುವ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಟ್ವಿಟರ್ನಲ್ಲಿ ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ಇಬ್ಬರೂ ಕ್ರಿಕೆಟಿಗರ ಹೆಸರುಗಳನ್ನು ಸರ್ಚ್ ಮಾಡುವ ವೇಳೆ ಅವರದ್ದೇ ಹೆಸರಿನ ಮತ್ತಿಬ್ಬರು ವ್ಯಕ್ತಿಗಳ ಹ್ಯಾಂಡಲ್ ಅನ್ನು ತಪ್ಪಾಗಿ ಹಿಡಿಕೊಂಡ ಟೀಂ ಇಂಡಿಯಾ ಬೆಂಬಲಿಗ ನೆಟ್ಟಿಗರು ಅವರನ್ನು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದ್ದಾರೆ.
ಆದರೂ ಸಹ ಇದಕ್ಕೆ ತಲೆ ಕೆಡಿಸಿಕೊಳ್ಳದ ಈ ’ಬೇರೆ’ ಟಿಮ್ ಪೇನ್ ಹಾಗೂ ಸ್ಟೀವ್ ಸ್ಮಿತ್, ನೆಟ್ಟಗರ ಟ್ರೋಲಿಂಗ್ ಅನ್ನು ಸಖತ್ತಾಗಿ ಎಂಜಾಯ್ ಮಾಡುತ್ತಿದ್ದಾರೆ. ಈ ಅಯೋಮಯ ಟ್ವೀಟ್ಗಳ ಸರಣಿಯನ್ನು ನೀವೂ ಒಮ್ಮೆ ನೋಡಿ ಎಂಜಾಯ್ ಮಾಡಿ.